ಮುಖ್ಯಮಂತ್ರಿಯಾಗಿ ಹಂಸಿತ, ಉಪಮುಖ್ಯಮಂತ್ರಿಯಾಗಿ ಪೂಜಾಶ್ರೀ
ಪುತ್ತೂರು: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಂಟ್ಯಾರು ಇದರ 2024 -25 ನೇ ಶೈಕ್ಷಣಿಕ ವರ್ಷದ ಮಂತ್ರಿ ಮಂಡಲದ ಚುನಾವಣೆಯನ್ನು ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ಮೊಬೈಲ್ ಇವಿಎಂ ಆಪ್ ಮೂಲಕ ನಡೆಸಲಾಯಿತು.
ಮುಖ್ಯಮಂತ್ರಿಯಾಗಿ ಎಂಟನೇ ತರಗತಿಯ ಹಂಸಿತ ಹಾಗೂ ಉಪಮುಖ್ಯಮಂತ್ರಿಯಾಗಿ ಏಳನೇ ತರಗತಿಯ ಪೂಜಾಶ್ರೀ ಚುನಾಯಿತರಾದರು. ಗೃಹ ಮತ್ತು ರಕ್ಷಣಾ ಮಂತ್ರಿಗಳಾಗಿ ಸಂದೇಶ್, ಮಹಮ್ಮದ್ ಮನ್ಸೂರ್, ಕೃಷಿ ಮತ್ತು ನೀರಾವರಿ ಮಂತ್ರಿಗಳಾಗಿ ವರುಣ್, ರಕ್ಷಿತ್ ಎಂ ಕೆ, ವಿದ್ಯಾ ಮತ್ತು ವಾರ್ತಾ ಮಂತ್ರಿಗಳಾಗಿ ದೀಕ್ಷಾ , ತನುಶ್ರೀ, ಪೂಜಶ್ರೀ, ಪ್ರೀತೇ ಶ್ ಡಿಸೋಜಾ, ಸಾಂಸ್ಕೃತಿಕ ಮಂತ್ರಿಗಳಾಗಿ ಧನ್ಯಶ್ರೀ ಲಾವಣ್ಯ, ಸ್ವಸ್ತಿಕ್ ನಾಯಕ್, ಆಹಾರ ಮಂತ್ರಿಗಳಾಗಿ ಸುಶಾನ್, ಮಹಮ್ಮದ್ ತಂಝಿಲ್ ಕ್ರೀಡಾ ಮತ್ತು ಶಿಸ್ತು ಮಂತ್ರಿಗಳಾಗಿ ಇಫ್ರಾ ಮಹಮ್ಮದ್ ಝಾಹಿದ್, ಆರೋಗ್ಯ ಮತ್ತು ಶುಚಿತ್ವ ಮಂತ್ರಿಗಳಾಗಿ ದ್ರುವಿ, ಹಿತೇಶ್, ಸೃಜನ್ ಆಯ್ಕೆಯಾದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಮೋಹಿನಿ ಇವರು ಚುನಾವಣಾ ಅಧಿಕಾರಿಯಾಗಿ, ಶಾಲಾ ಶಿಕ್ಷಕಿ ವಿದ್ಯಾ ಮತಗಟ್ಟೆ ಅಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸಿದರು. ಶಿಕ್ಷಕರು ಸಹಕರಿಸಿದರು.