*ಮೂರು ಹೋಬಳಿ ಕೇಂದ್ರದಿಂದ ಉಪಾಧ್ಯಕ್ಷ, ಜೊತೆ ಕಾರ‍್ಯದರ್ಶಿ ಆಯ್ಕೆ
*ಉಪಾಧ್ಯಕ್ಷರುಗಳಾಗಿ ರಮೇಶ್ ರೈ, ಜಯನಂದ ಬಂಟ್ರಿಯಾಲ್, ಸುಭಾಸ್ ಶೆಟ್ಟಿ
*ಜೊತೆ ಕಾರ‍್ಯದರ್ಶಿಗಳಾಗಿ ಸ್ವರ್ಣಲತಾ ರೈ, ಹರಿಣಾಕ್ಷಿ ಶೆಟ್ಟಿ, ಪುಲಸ್ಯ ರೈ
ಪುತ್ತೂರು: ತಾಲೂಕು ಬಂಟರ ಸಂಘದ ಕಾರ‍್ಯಕಾರಿ ಸಮಿತಿ ಸಭೆಯು ಜೂ.28 ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರುಗಿತು. ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ, ಮಾತನಾಡಿ ಬಂಟರ ಸಂಘವನ್ನು ಪುತ್ತೂರು ಮತ್ತು ಕಡಬ ತಾಲೂಕು ವ್ಯಾಪ್ತಿಯ ಪ್ರತಿ ಗ್ರಾಮ ಗ್ರಾಮದಲ್ಲಿ ಸಂಘಟಿಸಿ, ಸಮಗ್ರ ಬಂಟರ ಮಾಹಿತಿಯನ್ನು ಸಂಗ್ರಹಿಸಬೇಕು, ಆ ಮೂಲಕ ಬಂಟ ಸಮುದಾಯದ ಸಮಗ್ರ ಅಭಿವೃದ್ಧಿಗೆ ದಾರಿ ಆಗಬೇಕು ಎಂದು ಹೇಳಿದರು.
ಈ ನಿಟ್ಟಿನಲ್ಲಿ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ವಾಸಿಸುತ್ತಿರುವ ಬಂಟ ಸಮುದಾಯದ ಸಮಗ್ರ ಮಾಹಿತಿಯನ್ನು 15 ದಿನದೊಳಗೆ ಸಂಗ್ರಹಿಸುವ ಬಗ್ಗೆ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಯಿತು. ಸಂಗ್ರಹವನ್ನು ಮಾಡುವ ಬಂಟರ ಮಾಹಿತಿಗಳ ವಿವರ ಪತ್ರವನ್ನು ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ಪುತ್ತೂರು ಹೋಬಳಿಯಿಂದ ರಮೇಶ್ ರೈ ಡಿಂಬ್ರಿ, ಉಪ್ಪಿನಂಗಡಿ ಹೋಬಳಿಯಿಂದ ಜಯನಂದ ಬಂಟ್ರಿಯಾಲ್ ಹಾಗೂ ಕಡಬ ಹೋಬಳಿಯಿಂದ ಸುಭಾಸ್ ಕುಮಾರ್ ಶೆಟ್ಟಿ ಅರುವಾರು ಹಾಗೂ ಜೊತೆ ಕಾರ‍್ಯದರ್ಶಿಗಳಾಗಿ ಪುತ್ತೂರು ಹೋಬಳಿಯಿಂದ ಸ್ವರ್ಣಲತಾ ಜೆ.ರೈ, ಉಪ್ಪಿನಂಗಡಿ ಹೋಬಳಿಯಿಂದ ಹರಿಣಾಕ್ಷಿ ಜೆ.ಶೆಟ್ಟಿ ಹಾಗೂ ಕಡಬ ಹೋಬಳಿಯಿಂದ ಪುಲಸ್ಯ ರೈರವರುಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಸೀತಾರಾಮ ರೈ, ನಿಕಟಪೂರ್ವಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು ಹಾಗೂ ಬಂಟರ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು. ಬಂಟರ ಸಂಘದ ಪ್ರದಾನ ಕಾರ‍್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿಮ ಕೋಶಾಧಿಕಾರಿ ಸಂತೋಷ್ ಶೆಟ್ಟಿ ಸಾಜ ವಂದಿಸಿದರು.
ಅ.10: ಬಂಟರ ಭವನದಲ್ಲಿ ಆಟಿಡೊಂಜಿ ಬಂಟೆರೆ ಸೇರಿಗೆ
ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಅ.10 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಆಟಿಡೊಂಜಿ ಆಟಿಡೊಂಜಿ ಬಂಟೆರೆ ಸೇರಿಗೆ ಕಾರ‍್ಯಕ್ರಮ ವಿಶಿಷ್ಟ ರೀತಿಯ ಕಾರ‍್ಯಕ್ರಮಗಳೊಂದಿಗೆ ಜರಗಲಿದೆ
ಕಾವು ಹೇಮನಾಥ ಶೆಟ್ಟಿ
ಅಧ್ಯಕ್ಷರು ಬಂಟರ ಸಂಘ ಪುತ್ತೂರು