ರಾಮಕುಂಜ-ಹಳೆನೇರೆಂಕಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ

0

ಅಧ್ಯಕ್ಷೆ: ತೇಜಸ್ವಿನಿ, ಪ್ರಧಾನ ಕಾರ್ಯದರ್ಶಿ: ಮೀನಾಕ್ಷಿ, ಕೋಶಾಧಿಕಾರಿ: ಹೇಮಾವತಿ

ರಾಮಕುಂಜ: ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಹಳೆನೇರೆಂಕಿ-ರಾಮಕುಂಜ ಇದರ 20ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷರಾಗಿ ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ ಕಟ್ಟಪುಣಿ, ಪ್ರಧಾನ ಕಾರ್ಯದರ್ಶಿಯಾಗಿ ಮೀನಾಕ್ಷಿಶೇಖರ ಆನ, ಕೋಶಾಧಿಕಾರಿಯಾಗಿ ಹೇಮಾವತಿ ಜೆ. ಪೂಜಾರಿ ಹಲ್ಯಾರ ಆಯ್ಕೆಗೊಂಡಿದ್ದಾರೆ.


ಜೂ.28ರಂದು ರಾಮಕುಂಜದಲ್ಲಿ ಸುರೇಖಾ ಬರೆಂಬಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಉಪಾಧ್ಯಕ್ಷರಾಗಿ ವಸಂತಿ ಕನೆಮಾರ್, ಜೊತೆ ಕಾರ್ಯದರ್ಶಿಯಾಗಿ ಕವಿತಾ ಪೆರ್ಜಿ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ದೇವಕಿ ಹಿರಿಂಜ, ಪ್ರಮೀಳಾ ಶಾರದಾನಗರ, ಶ್ವೇತಾ, ಜಾಹ್ನವಿ, ಸುಮಲತಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here