ಕೊಳ್ತಿಗೆ ಪ್ರಾ.ಕೃ.ಪ.ಸ ಸಂಘದ ಪಾಲ್ತಾಡಿ ಶಾಖೆಯ ಮಾರಾಟ ಸಹಾಯಕ ಉಮೇಶ್ ಬಿ ನಿವೃತ್ತಿ – ಅಭಿನಂದನೆ, ಬೀಳ್ಕೊಡುಗೆ ಸಮಾರಂಭ

0

ಉಮೇಶ್ ಅವರು ಈ ಭಾಗದ ಜನತೆಯ ಹೃದಯ ಗೆದ್ದಿದ್ದಾರೆ ಎಂಬುದಕ್ಕೆ ಸೇರಿರುವ ಜನತೆಯೇ ಸಾಕ್ಷಿ – ಎಸ್.ಎನ್.ಮನ್ಮಥ

ಸವಣೂರು: ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ಮಾರಾಟ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಉಮೇಶ್ ಬಿ ಯವರಿಗೆ ಅಭಿನಂದನೆ ಮತ್ತು ಬೀಳ್ಕೊಡುಗೆ ಸಮಾರಂಭ ಜು.1ರಂದು ಸಂಘದ ಪಾಲ್ತಾಡಿ ಶಾಖೆಯ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಉಮೇಶ್ ಬಿ.ಅವರನ್ನು ಅಭಿನಂದಿಸಿ ಮಾತನಾಡಿದ ,ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ‌ನ ನಿರ್ದೇಶಕ ,ಐವರ್ನಾಡು ಪ್ರಾ.ಕೃ.ಸ.ಅಂಘದ ಅಧ್ಯಕ್ಷ ಎಸ್.ಎನ್ .ಮನ್ಮಥ ಅವರು ಮಾತನಾಡಿ, ಉಮೇಶ್ ಸಹಕಾರಿ ಸಂಘದಲ್ಲಿ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ.ಈ ಕಾರಣಕ್ಕೆ ಅವರು ಜನತೆಯ ಹೃದಯ ಗೆದ್ದಿದ್ದಾರೆ ಇದಕ್ಕೆ ಸಮಾರಂಭದಲ್ಲಿ ಸೇರಿರುವ ಜನತೆಯೇ ಸಾಕ್ಷಿ ಎಂದರು.

ಕೊಳ್ತಿಗೆ ಪ್ರಾ.ಕೃ.ಪ.ಸಹಕಾರ ಸಂಘಕ್ಕೆ ಜನಪ್ರತಿನಿಧಿಗಳ ಸಹಕಾರವೂ ಸಿಗಲಿದೆ.ಪುತ್ತೂರು ಹಾಗೂ ಸುಳ್ಯ ವಿಧಾನ ಸಭಾ ಕ್ಷೇತ್ರ ,ಸವಣೂರು ಹಾಗೂ ಕೊಳ್ತಿಗೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಇರುವುದರಿಂದ ಜನಪ್ರತಿನಿಧಿಗಳ ಬೆಂಬಲ ಹೆಚ್ಚು ಸಿಗುತ್ತದೆ ಎಂದರು.

ಶೂನ್ಯ ಬಡ್ಡಿದರದ ಬೆಳೆ ಸಾಲ 5 ಲಕ್ಷಕ್ಕೆ ಏರಿಸಲು ಪ್ರಯತ್ನ

ಕೃಷಿಕರಿಗೆ ಸಹಕಾರ ಸಂಘದ ಮೂಲಕ ನೀಡುವ ಶೂನ್ಯ ಬಡ್ಡಿದರದ ಬೆಳೆ ಸಾಲವನ್ನು 5 ಲಕ್ಷಕ್ಕೆ ಏರಿಸಲು ಎಲ್ಲಾ ರೀತಿಯ ಪ್ರಯತ್ನಗಳು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ.ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಸಹಕಾರ ಸಂಘಗಳು ನಿರಂತರವಾಗಿ ಯೋಜನೆಗಳನ್ನು ನೀಡಲಾಗುತ್ತದೆ ಎಂದರು.

ಸಮಾಜದಿಂದ ಸಿಗುವ ಗೌರವ ಶಾಶ್ವತವಾಗಿ ಉಳಿಯುತ್ತದೆ- ಇಂದಿರಾ ಬಿ.ಕೆ.

ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ. ಮಾತನಾಡಿ, ಉಮೇಶ್ ಅವರ ಕುಟುಂಬ ಸಂಸ್ಕಾರಯುತ ಕುಟುಂಬವಾಗಿದೆ.ನಿರಂತರ ಶ್ರಮದಿಂದ ಮೇಲೆ ಬಂದವರು.ಒಬ್ಬ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಾದರೂ ಉತ್ತಮವಾಗಿ ಕೆಲಸ ಮಾಡಿದರೆ ಸಮಾಜ ಗೌರವಿಸುತ್ತದೆ. ಸಮಾಜದಿಂದ ಸಿಗುವ ಗೌರವ ಶಾಶ್ವತವಾಗಿ ಉಳಿಯುತ್ತದೆ.ಈ ನಿಟ್ಟಿನಲ್ಲಿ ಉಮೇಶ್ ಬಿ.ಅವರ ಸೇವೆಯನ್ನು ಸಮಾಜ ಗೌರವಿಸುತ್ತದೆ ಎಂದರು.

ಮಿಲಿಟರಿ ಇಂಜಿನಿಯರಿಂಗ್ ಸರ್ವಿಸ್‌ನ ಮಾಜಿ ಸೇನಾಧಿಕಾರಿ ಸಂಜೀವ ಗೌಡ ಪಾಲ್ತಾಡಿ ಮಾತನಾಡಿ, ಉಮೇಶ್ ಬಿ. ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದರು.

ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಮಾಜಿ ನಿರ್ದೇಶಕ ದಿವಾಕರ ಬಂಗೇರ,ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಸ್ಥಾಪಕಾಧ್ಯಕ್ಷ ನಾರಾಯಣ ರೈ ಪಾಲ್ತಾಡು ಅವರು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ರಮಣ ಕೆ.ಎಸ್ ಅವರು ಮಾತನಾಡಿ, ಸಹಕಾರಿ ಸಂಘದ ಮೇಲೆ ಹಾಗೂ ಸಿಬಂದಿಗಳ ಮೇಲೆ ಪಾಲ್ತಾಡು ಭಾಗದವರು ವಿಶೇಷ ಪ್ರೀತಿ ಹಾಗೂ ಗೌರವ ನೀಡುತ್ತಿದ್ದಾರೆ.ವರ್ಷದ ಹಿಂದೆ ನಿಧನ ಹೊಂದಿದ ಪಾಲ್ತಾಡಿ ಶಾಖಾ ವ್ಯವಸ್ಥಾಪಕ ಜಯರಾಮ ಅವರು ಅಂತಿಮ ದರ್ಶನಕ್ಕೆ ಪಾಲ್ತಾಡಿ ಶಾಖೆಯ ವ್ಯಾಪ್ತಿಯಿಂದ ಜನಸಾಗರವೇ ಬಂದಿತ್ತು.ಈ ಹಿಂದೆ ಶಾಖಾ ವ್ಯವಸ್ಥಾಪಕರಾಗಿದ್ದ ಬಾಲಗಂಗಾಧರ ಅವರು ಪ್ರಧಾನ ಕಚೇರಿಗೆ ವರ್ಗಾವಣೆಯಾದಾಗಲೂ ವರ್ಗಾವಣೆ ಮಾಡಬಾರದೆಂದು ಕೇಳಿಕೊಂಡಿದ್ದರು.2 ತಿಂಗಳ ಹಿಂದೆ ನಿವೃತರಾದ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಂಸಾವತಿ ರೈ ಅವರಿಗೂ ಪಾಲ್ತಾಡಿಯವರು ಗೌರವ ಸಲ್ಲಿಸಿದ್ದರು.ಇದು ಪಾಲ್ತಾಡಿ ಶಾಖಾ ವ್ಯಾಪ್ತಿಯ ಸಾರ್ವಜನಿಕರ ಪ್ರೀತಿಯ ಸಂಕೇತ ಎಂದರು.

ಉಮೇಶ್ ಅವರು ಸಂಘದಲ್ಲಿ ಸುಧೀರ್ಘ 35 ವರ್ಷ ಸೇವೆ ಸಲ್ಲಿಸಿದ್ದಾರೆ.ಪಾಲ್ತಾಡಿ ಶಾಖೆಯ ಆರಂಭದ ಸಮಯದಲ್ಲಿ ಮೂರು ವರ್ಷಗಳ ಕಾಲ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡಿದ್ದರು.ಅಲ್ಲದೇ ಭಧ್ರತೆಯ ದೃಷ್ಟಿಯಿಂದ ರಾತ್ರಿ ಸಮಯದಲ್ಲಿ ತಂಗುತ್ತಿದ್ದರು.ಅವರ ಸೇವೆಯೊಂದಿಗೆ ತ್ಯಾಗವೂ ಇತ್ತು. ಉಮೇಶ್ ಅವರ ಸೇವಾ ಅವಧಿಯಲ್ಲಿ ಜನರ ಮೇಲಿನ ಒಡನಾಟ ಪ್ರೀತಿಗೆ ಕಾರ್ಯಕ್ರಮಕ್ಕೆ ಸೇರಿದ ಜನತೆಯ ಸಾಕ್ಷಿ ಹಾಗೂ ಪ್ರಾಮಾಣಿಕ ಸೇವೆಗೆ ಸಂದ ಗೌರವ ಎಂದರು.

ನಿವೃತರಾದ ಉಮೇಶ್ ಬಿ. ಅವರು ಮಾತನಾಡಿ ,ತನ್ನ ಸೇವೆಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಮೇಶ್ ಬಿ. ಅವರನ್ನು ನವೋದಯ ಸ್ವಸಹಾಯ ಸಂಘಗಳ ಪಾಲ್ತಾಡಿ ಒಕ್ಕೂಟ ,ಕೊಳ್ತಿಗೆ ರೈತಮಿತ್ರಕೂಟ ಹಾಗೂ ವಿವಿಧ ಸಂಸ್ಥೆ ,ವೈಯಕ್ತಿಕವಾಗಿ ಅಭಿನಂದಿಸಲಾಯಿತು.

ಗೌರವಾರ್ಪಣೆ

ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್.ಎನ್.ಮನ್ಮಥ ,ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಸ್ಥಾಪಕಾಧ್ಯಕ್ಷ ಪಟೇಲ್ ನಾರಾಯಣ ರೈ ಪಾಲ್ತಾಡು ,ಮಾಜಿ ನಿರ್ದೇಶಕ ಬಿ.ಕೆ.ರಮೇಶ್ ಕಲ್ಲೂರಾಯ ಅವರನ್ನು ಗೌರವಿಸಲಾಯಿತು.

ಸಂಘದ ನಿರ್ದೇಶಕರಾದ ಉಪಾಧ್ಯಕ್ಷರಾದ ಲಕ್ಷ್ಮೀ ಕೆ.ಜಿ., ಮುಖ್ಯಕಾರ್ಯನಿರ್ವಹಣಾಧಿಕಾರಿ ಗಿರಿಜಾ ಕೆ., ನಿರ್ದೇಶಕರಾದ ಗಂಗಾಧರ ಗೌಡ ಕೆಮ್ಮಾರ,ಸತೀಶ್ ಪಾಂಬಾರು,ಅಣ್ಣಪ್ಪ ನಾಯ್ಕ ,ಸತೀಶ್ ಪಾಂಬಾರು,ಶಿವರಾಮ ,ಗುರುವಪ್ಪ ಎಂ.,ನಾಗವೇಣಿ ಕೆ.ಕೆ.,ವಿಶಾಲಾಕ್ಷಿ ,ಶ್ರೀಧರ್ ಗೌಡ ಅಂಗಡಿಹಿತ್ಲು,ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನ ಮೇಲ್ವಿಚಾರಕರಾದ ಶರತ್ ಡಿ. ,ನಿವೃತ ಸಿಇಓ ಹಂಸಾವತಿ ರೈ ,ಬೆಳಿಯಪ್ಪ ಗೌಡ ,ಮಾಜಿ ನಿರ್ದೇಶಕ ಬಾಬುರಾಜೇಂದ್ರ ,ರೈತಮಿತ್ರ ಕೂಟ ಕೊಳ್ತಿಗೆ ಅಧ್ಯಕ್ಷರಾದ ಮುರಳೀಧರ ಕೆಮ್ಮಾರ,ಕೊಳ್ತಿಗೆ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಅಶೋಕ ಒರ್ಕೊಂಬು ,ಪಾಲ್ತಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವಿನೋದ್ ರೈ ಪಾಲ್ತಾಡು ,ಕಾರ್ಯದರ್ಶಿ ಮೋಹನ್ ಗೌಡ ,ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಹರ್ಷಿತ್ ಕುದ್ಕುಳಿ , ಸವಣೂರು ಗ್ರಾ.ಪಂ.ಸದಸ್ಯರಾದ ತಾರಾನಾಥ ಬೊಳಿಯಾಲ ,ಭರತ್ ರೈ ,ಶಬೀನಾ ,ಕೊಳ್ತಿಗೆ ಗ್ರಾ.ಪಂ.ಸದಸ್ಯೆ ಶುಭಲತಾ ಜೆ. ರೈ ,ಪಾಲ್ತಾಡಿ ಒಕ್ಕೂಟದ ಅಧ್ಯಕ್ಷೆ ವಸಂತ,ನವೋದಯ ಸ್ವಸಹಾಯ ಸಂಘದ ಪ್ರೇರಕರಾದ ಕಲ್ಪವಲ್ಲಿ ,ಚೈತ್ರ,ಪಾಲ್ತಾಡಿ ಗ್ರಾಮ ಆಡಳಿತಾಧಿಕಾರಿ ರವಿಚಂದ್ರ ,ಗ್ರಾಮ ಸಹಾಯಕ ಬಾಬು ಬಿ, ಅಂಕತಡ್ಕ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಪ್ರವೀಣ್ ಭಂಡಾರಿ,ಮುಖ್ಯಗುರು ಗಂಗಾಧರ ,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ಚಂದ್ರ ರೈ ಪಾಲ್ತಾಡಿ ಹಾಗೂ ಸಂಘದ ಸದಸ್ಯರು ,ನವೋದಯ ಸಂಘದ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಸಹ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಾಲಗಂಗಾಧರ ಕೆ. ,ಪಾಲ್ತಾಡಿ ಶಾಖಾ ವ್ಯವಸ್ಥಾಪಕ ಭರತ್ ರಾಜ್ ಕೆ., ಡಾ.ರಾಮಚಂದ್ರ ಭಟ್ ಅವರು ಉಮೇಶ್ ಬಿ. ಅವರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.

ಸಂಘದ ನಿಕಟಪೂರ್ವ ಅಧ್ಯಕ್ಷ ,ಹಾಲಿ ನಿರ್ದೇಶಕರಾದ ವಸಂತ ಕುಮಾರ್ ರೈ ದುಗ್ಗಳ ಅವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಂಘದ ನಿರ್ದೇಶಕ ತೀರ್ಥಾನಂದ ದುಗ್ಗಳ ವಂದಿಸಿದರು. ರೇಶ್ಮಾ ಪ್ರಾರ್ಥಿಸಿದರು.ಸಿಬಂದಿ ಪುನೀತ್ ಡಿ.ವಿ.ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here