ನೆಲ್ಯಾಡಿ: ರಬ್ಬರ್ ಟ್ಯಾಪಿಂಗ್ ವೇಳೆ ವ್ಯಕ್ತಿಯೋರ್ವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ಕೊಣಾಲು ಗ್ರಾಮದ ಬಸ್ತಿ ಎಂಬಲ್ಲಿ ಜು.1ರಂದು ನಡೆದಿದೆ.
ಕೊಣಾಲು ಗ್ರಾಮದ ಆರ್ಲ ನಿವಾಸಿ ಪದ್ಮರಾಜ್ (55ವ.)ಮೃತಪಟ್ಟವರಾಗಿದ್ದಾರೆ.
ಕೊಣಾಲು ಗ್ರಾಮದ ಬಸ್ತಿ ಎಂಬಲ್ಲಿ ಸಮಂತ್ ಎಂಬವರ ರಬ್ಬರ್ ತೋಟವನ್ನು ವಾಸು ಎಂ.ಎನ್. ಅವರು ಲೀಸ್‌ಗೆ ತೆಗೆದುಕೊಂಡಿದ್ದು ಪದ್ಮರಾಜ್‌ರವರು ಈ ರಬ್ಬರ್ ತೋಟದಲ್ಲಿ ಕಳೆದ ಎರಡು ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದರು. ಜು.1ರಂದು ಬೆಳಿಗ್ಗೆ 6 ಗಂಟೆಗೆ ಅವರು ರಬ್ಬರ್ ತೋಟಕ್ಕೆ ಟ್ಯಾಪಿಂಗ್ ಕೆಲಸಕ್ಕೆ ಹೋಗಿದ್ದರು. ಇವರ ಪುತ್ರ ಅರುಣ್‌ಕುಮಾರ್ ಅವರು ಬೆಳಿಗ್ಗೆ 10.45ಕ್ಕೆ ತಂದೆ ಪದ್ಮರಾಜ್‌ರವರಿಗೆ ಕರೆ ಮಾಡಿದಾಗ ಸ್ವೀಕರಿಸದೇ ಇದ್ದ ಹಿನ್ನೆಲೆಯಲ್ಲಿ ತಂದೆಯ ಗೆಳೆಯ ಶಶಿಧರನ್ ಪಿಳ್ಳೆಯವರಿಗೆ ಕರೆ ಮಾಡಿ ತಂದೆಯನ್ನು ನೋಡಿ ಬರುವಂತೆ ತಿಳಿಸಿದ್ದರು. ಅದರಂತೆ ಶಶಿಧರನ್ ಪಿಳ್ಳೆ ಅವರು ರಬ್ಬರ್ ತೋಟಕ್ಕೆ ಹೋದ ವೇಳೆ ಪದ್ಮರಾಜ್‌ರವರು ಬಿದ್ದುಕೊಂಡಿದ್ದರು. ಬಳಿಕ ಅರುಣ್‌ಕುಮಾರ್ ಹಾಗೂ ಅವರ ಗೆಳೆಯ ವೈಶಾಕ್ ಅವರು ಹೋಗಿ ನೋಡಿದಾಗ ಪದ್ಮರಾಜ್ ಅವರು ಮೃತಪಟ್ಟಿದ್ದರು. ಪದ್ಮರಾಜ್ ಅವರು ಜು.1ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 11.15ರ ಮಧ್ಯೆ ಹೃದಯಘಾತದಿಂದ ಮೃತಪಟ್ಟಿರುವುದಾಗಿ ಅವರ ಪುತ್ರ ಅರುಣ್‌ಕುಮಾರ್ ಅವರು ನೀಡಿದ ವರದಿಯಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.