ಬೆಟ್ಟಂಪಾಡಿ: ಬೆಟ್ಟಂಪಾಡಿಯ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಮಹಾಸಭೆಯು ಜೂ. 30 ರಂದು ಸಂಘದ ಅಧ್ಯಕ್ಷ ಐ. ಗೋಪಾಲಕೃಷ್ಣ ರಾವ್ ರವರ ಅಧ್ಯಕ್ಷತೆಯಲ್ಲಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ಬಿಲ್ವಶ್ರೀ’ ಸಭಾಂಗಣದಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ಪ್ರದೀಪ್ ರೈ ಕೆ. ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಅಧ್ಯಕ್ಷ ಐ. ಗೋಪಾಲಕೃಷ್ಣ ರಾವ್ ಮಾತನಾಡಿ ಎರಡು ವರ್ಷಗಳಲ್ಲಿ ಸಂಘದ ವಾರ್ಷಿಕೋತ್ಸವ ಮತ್ತು ಕಾರ್ಯಚಟುವಟಿಕೆಗಳಲ್ಲಿ ಸಹಕರಿಸಿದ ಸರ್ವ ಸದಸ್ಯರಿಗೂ ಕೃತಜ್ಣತೆ ಸಲ್ಲಿಸುತ್ತೇನೆ ಎಂದರು. ಸಂಘದ ಗೌರವಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ಮಾತನಾಡಿ ಸಂಘವನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲು ಇತರ ಸಂಘ ಸಂಸ್ಥೆಗಳೊಂದಿಗೆ ಈ ಸಂಘದ ಸಹಭಾಗಿತ್ವವನ್ನು ವಹಿಸುವುದರ ಬಗ್ಗೆ ಮಾತನಾಡಿದರು.
ಅಭಿನಂದನೆ
ಇದೇ ವೇಳೆ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಸಂಘದ ಗೌರವಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಗೌರವ ಸಲಹೆಗಾರರಾದ ಎನ್. ಸಂಜೀವ ರೈ ಸನ್ಮಾನಿತರ ಬಗ್ಗೆ ಮಾತನಾಡಿದರು. ಇದೇ ವೇಳೆ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ಹಾಲಿ ಪದಾಧಿಕಾರಿಗಳನ್ನು ಮರು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಎನ್. ಸಂಜೀವ ರೈ, ಗೌರವ ಸಲಹೆಗಾರರಾಗಿ ಎಂ. ಸುಂದರ ಶೆಟ್ಟಿ ಆಯ್ಕೆಗೊಂಡರು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ವಿಶ್ರಾಂತ ಅರ್ಚಕ ದಿವಾಕರ ಭಟ್ ಕಾನುಮೂಲೆ, ಸಂಘದ ಗೌರವ ಸಲಹೆಗಾರ ಸುಬ್ಬಣ್ಣ ಗೌಡ ಪಾರ, ಅರ್ಥಧಾರಿ ಭಾಸ್ಕರ ಶೆಟ್ಟಿ ಅಜ್ಜಿಕಲ್ಲು, ಕೋಶಾಧಿಕಾರಿ ಶ್ಯಾಂಪ್ರಸಾದ್ ಎಂ. ಹಾಗೂ ಸದಸ್ಯರು ವಿವಿಧ ಸಲಹೆ ಸೂಚನೆ ನೀಡಿದರು.
ಚಹಾಕೂಟ
ಸಂಘದ ಗೌರವ ಸಲಹೆಗಾರರಾಗಿದ್ದುಕೊಂಡು ಇತ್ತೀಚೆಗೆ ತನ್ನ ವೈವಾಹಿಕ ಸುವರ್ಣ ಸಂಭ್ರಮ ಆಚರಿಸಿಕೊಂಡ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರೂ ಆದ ಎನ್. ಸಂಜೀವ ರೈಯವರು ಚಹಾಕೂಟ ಏರ್ಪಡಿಸಿದ್ದರು. ಸಂಜೀವ ರೈಯವರ ಪುತ್ರ ಪ್ರಶಾಂತ್ ರೈ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರದೀಪ್ ರೈ ಸ್ವಾಗತಿಸಿ, ವಂದಿಸಿದರು.