ಅಧ್ಯಕ್ಷ:ಡಾ.ರವಿಪ್ರಕಾಶ್,ಕಾರ್ಯದರ್ಶಿ:ವಸಂತ್ ಜಾಲಾಡಿ,ಕೋಶಾಧಿಕಾರಿ:ಶಶಿಕಿರಣ್ ರೈ
ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಧನ್ವಂತರಿ ಆಸ್ಪತ್ರೆಯ ವೈದ್ಯ ಡಾ.ರವಿಪ್ರಕಾಶ್ ಕಜೆ, ಕಾರ್ಯದರ್ಶಿ ಆದರ್ಶ ವಿವಿಧೋದ್ಧೇಶ ಸಹಕಾರ ಸಂಘದ ಪ್ರಧಾನ ವ್ಯವಸ್ಥಾಪಕ ವಸಂತ್ ಜಾಲಾಡಿ, ಕೋಶಾಧಿಕಾರಿಯಾಗಿ ಪ್ರಗತಿಪರ ಕೃಷಿಕ ಹಾಗೂ ಉದ್ಯಮಿ ಶಶಿಕಿರಣ್ ರೈ ನೂಜಿರವರು ಆಯ್ಕೆಯಾಗಿದ್ದಾರೆ.
ಉಳಿದಂತೆ ನಿಕಟಪೂರ್ವ ಅಧ್ಯಕ್ಷರಾಗಿ ಬೂಡಿಯಾರು ರಾಧಾಕೃಷ್ಣ ರೈ, ನಿಯೋಜಿತ ಅಧ್ಯಕ್ಷ ಹಾಗೂ ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಶಶಿಧರ್ ಕಿನ್ನಿಮಜಲು, ಉಪಾಧ್ಯಕ್ಷರಾಗಿ ರವಿಕುಮಾರ್ ರೈ, ಜೊತೆ ಕಾರ್ಯದರ್ಶಿಯಾಗಿ ನವೀನ್ ರೈ ಪಂಜಳ, ಸಾರ್ಜಂಟ್ ಎಟ್ ಆರ್ಮ್ಸ್ ಸುರೇಶ್ ಕೆ.ಯು, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ವಿಜಯ್ ಬಿ.ಎಸ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಪುರಂದರ್ ರೈ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಕೃಷ್ಣನಾರಾಯಣ ಮುಳಿಯ, ಯೂತ್ ಸರ್ವಿಸ್ ನಿರ್ದೇಶಕರಾಗಿ ಪ್ರಕಾಶ್ ರೈ ಮನವಳಿಕೆ, ಮೆಂಬರ್‌ಶಿಪ್ ಚೇರ್‌ಮ್ಯಾನ್ ಶರತ್ ಕುಮಾರ್ ರೈ, ಟಿಆರ್‌ಎಫ್ ಚೇರ್‌ಮ್ಯಾನ್ ಮುರಳಿಶ್ಯಾಂ, ಪೋಲಿಯೋ ಪ್ಲಸ್ ಚೇರ್‌ಮ್ಯಾನ್ ಚಂದ್ರಶೇಖರ್, ಐಟಿ ಮತ್ತು ವೆಬ್‌ಸೈಟ್ ಚೇರ್‌ಮ್ಯಾನ್ ಅಬ್ಬಾಸ್ ಮುರ, ಜಿಲ್ಲಾ ಪ್ರಾಜೆಕ್ಟ್ ಚೇರ್‌ಮ್ಯಾನ್ ಕೆ.ವಿ ಶೆಣೈ, ಬುಲೆಟಿನ್ ಎಡಿಟರ್ ಡಾ.ಶ್ಯಾಮ್‌ಪ್ರಸಾದ್‌ರವರು ಆಯ್ಕೆಯಾಗಿದ್ದಾರೆ.
ಜು.6 ರಂದು ಪದ ಪ್ರದಾನ..
ಜು.6 ರಂದು ಸಂಜೆ ರೋಟರಿ ಮನೀಷಾ ಸಭಾಂಗಣದಲ್ಲಿ ನಡೆಯಲಿರುವ ಪದ ಪ್ರದಾನ ಸಮಾರಂಭದಲ್ಲಿ ಪದ ಪ್ರದಾನ ಅಧಿಕಾರಿಯಾಗಿ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ಇದರ ಪಿಡಿಜಿ ಸುರೇಶ್ ಚೆಂಗಪ್ಪರವರು ಪದಪ್ರದಾನವನ್ನು ನೆರವೇರಿಸಲಿದ್ದಾರೆ. ಗೌರವ ಅತಿಥಿಗಳಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ಮಿತ್ತಳಿಕೆ ಸೂರ‍್ಯನಾಥ ಆಳ್ವ, ವಲಯ ಸೇನಾನಿ ಮೊಹಮದ್ ರಫೀಕ್ ದರ್ಬೆ, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್‌ರವರು ಭಾಗವಹಿಸಲಿದ್ದಾರೆ ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.