ನೆಲ್ಯಾಡಿ ಬೆಥನಿ ಪ.ಪೂ.ಕಾಲೇಜು ಶಿಕ್ಷಕ ರಕ್ಷಕ ಸಂಘ

0

ನೆಲ್ಯಾಡಿ: ನೆಲ್ಯಾಡಿ ಬೆಥನಿ ಪದವಿ ಪೂರ್ವ ಕಾಲೇಜಿನ 2024-25ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಜು.4ರಂದು ನಡೆಯಿತು.

ನೂತನ ಅಧ್ಯಕ್ಷರಾಗಿ ಜಯಾನಂದ ಬಂಟ್ರಿಯಾಲ್, ಉಪಾಧ್ಯಕ್ಷರಾಗಿ ಸಣ್ಣಿ ಕೆ.ಎಸ್, ಕಾರ್ಯದರ್ಶಿಯಾಗಿ ಶಿಕ್ಷಕಿ ಎಲಿಸಬೆತ್ ಎನ್.ಪಿ. ಹಾಗೂ ಜೊತೆ ಕಾರ್ಯದರ್ಶಿಯಾಗಿ ಮೇರಿ ಸ್ಟೀಫನ್ ಆಯ್ಕೆಯಾದರು. ಸಂಸ್ಥೆಯ ಪ್ರಾಂಶುಪಾಲ ಡಾ| ವರ್ಗೀಸ್ ಕೈಪನಡ್ಕ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪೋಷಕರು, ಶಿಕ್ಷಕರು ಹಾಗೂ ಸಂಸ್ಥೆಯವರ ನಡುವೆ ಪರಸ್ಪರ ಬಾಂಧವ್ಯತೆ ಇರಬೇಕು. ವಿದ್ಯಾರ್ಥಿಗಳು ತಪ್ಪು ಮಾಡಿದ್ದಲ್ಲಿ ತಿದ್ದುವ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕು. ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶಿಸ್ತನ್ನು ಅಳವಡಿಸಿದಾಗ ಎಲ್ಲಾ ಪೋಷಕರು ಹಾಗೂ ಶಿಕ್ಷಕ ರಕ್ಷಕ ಸಂಘದವರು ಸಹಕಾರ ನೀಡಬೇಕು. ವಿದ್ಯಾರ್ಥಿಯಾದವನು ನಾಲ್ಕು ಕೋಣೆಗಳ ಮಧ್ಯೆ ಕುಳಿತು ಅಂಕಗಳಿಸುವುದು ಮಾತ್ರವಲ್ಲ. ಆತ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ ಎಂದರು.
ಉಪಪ್ರಾಂಶುಪಾಲ ಜೋಸ್.ಎಂ.ಜೆ., 2023-24ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಪೋಷಕ ಪ್ರತಿನಿಧಿಗಳು, ಶಿಕ್ಷಕರು ಪಾಲ್ಗೊಂಡಿದ್ದರು. ಜೋಸ್ ಎಂ.ಜೆ ಸ್ವಾಗತಿಸಿದರು. ಎಲಿಸಬೆತ್ ಎನ್.ಪಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here