ತುಂಬಿದ ಕೆರೆ-ರಸ್ತೆಗೆ ನುಗ್ಗಿದ ನೀರು- ದಲಿತ ಕುಟುಂಬಕ್ಕೆ ಜಲದಿಗ್ಬಂಧನ

0

ಕಡಬ: ಕುಟ್ರುಪಾಡಿ ಗ್ರಾಮ ವ್ಯಾಪ್ತಿಯ ಕಡಬ ಹಳೇಸ್ಟೇಷನ್ ಕೆರೆಯಲ್ಲಿ ನೀರು ತುಂಬಿದ್ದು ಪಕ್ಕದ ರಸ್ತೆಗೆ ನುಗ್ಗಿದ ಪರಿಣಾಮ ದಲಿತ ಕುಟುಂಬವೊಂದು ಮನೆಯಿಂದ ಹೋಗಲು ಕಷ್ಟ ಪಡುವಂತಾಗಿದೆ.


ಹಳೆಸ್ಟೇಷನ್ ನಿವಾಸಿ ಪೊಡಿಯ ಎಂಬವರ ಕುಟುಂಬ ಈ ಸಮಸ್ಯೆಗೆ ಸಿಲುಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಹೆಚ್ಚಿನ ಮಳೆಯಾದರೆ ಮನೆಗೆ ನೀರು ನುಗ್ಗುವ ಸಾಧ್ಯತೆಯಿದೆ. ದಿನನಿತ್ಯ ಶಾಲೆಗೆ ಹೋಗುವ ಸಣ್ಣ ಮಕ್ಕಳನ್ನು ಅಪಾಯಕಾರಿ ಸ್ಥಿತಿಯಲ್ಲಿ ಕರೆದೊಯ್ಯುತ್ತಿದ್ದು, ಸಂಭವಿಸಬಹುದಾದ ಅನಾಹುತಗಳಿಗೆ ಯಾರು ಹೊಣೆ ಎಂದು ಜನರು ಪ್ರಶ್ನಿಸುವಂತಾಗಿದೆ. ಕೆರೆಯಿಂದ ನೀರನ್ನು ಹೊರಗೆ ಬಿಡಲಾಗುತ್ತಿದ್ದರೂ ನೀರು ಸರಗವಾಗಿ ಹರಿದು ಹೋಗದೆ ಸಮಸ್ಯೆ ಸೃಷ್ಟಿಯಾಗಿದೆ. (ಇಂದು) ಜು.5ರಂದು ಕಡಬ ಸಮುದಾಯ ಕೇಂದ್ರದ ಆರೋಗ್ಯ ಸಹಾಯಕಿ ಮತ್ತು ಆಶಾ ಕಾರ್ಯಕರ್ತೆ ಮನೆ ಭೇಟಿ ನೀಡುವ ಸಲುವಾಗಿ ಹೋಗಿದ್ದ ಸಂದರ್ಭದಲ್ಲಿ ನೀರು ತುಂಬಿರುವ ವಿಚಾರ ಗಮನಕ್ಕೆ ಬಂದಿದೆ. ಮನೆ ಮಂದಿಯನ್ನು ಸಂಪರರ್ಕಿಸಲು ಸಾಧ್ಯವಾಗದೆ ಹಿಂತಿರುಗಿ ಬಂದಿರುವ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here