ಈ ಭಾರಿ ಓಮೇಗಾ ಆಸ್ಪತ್ರೆ, ಮಂಗಳೂರು ಹಾರ್ಟ್‌ಸ್ಕ್ಯಾನ್ ಫೌಂಡೇಶನ್ ಉಚಿತ ಹೃದಯ ತಪಾಸಣೆ
ಪುತ್ತೂರು: ಪ್ರತಿ ತಿಂಗಳು ವಿಶೇಷ ತಪಾಸಣಾ ಸೌಲಭ್ಯಗಳನ್ನು ಅಳವಡಿಸಿಕೊಂಡು ಭಕ್ತಾದಿಗಳಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿರುವ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಉಚಿತ ವೈದ್ಯಕೀಯ ಶಿಬಿರದ 28ನೇ ವೈದ್ಯಕೀಯ ಶಿಬಿರವು ಜು.7ರಂದು ನಡೆಯಲಿದೆ. ಈ ಭಾರಿ ವಿಶೇಷವಾಗಿ ಮಂಗಳೂರಿನ ಓಮೇಗಾ ಆಸ್ಪತ್ರೆ ಹಾಗೂ ಮಂಗಳೂರು ಹಾರ್ಟ್‌ಸ್ಕ್ಯಾನ್ ಫೌಂಡೇಶನ್ ಉಚಿತ ಹೃದಯ ತಪಾಸಣೆ ನಡೆಯಲಿದೆ.
ಆರೋಗ್ಯ ರಕ್ಷಾ ಸಮಿತಿ ಹಾಗೂ ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ಆಶ್ರಯದಲ್ಲಿ ಹಲವು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಳೆದ 27 ತಿಂಗಳುಗಳಿಂದ ಪ್ರತಿ ಶಿಬಿರದಲ್ಲಿ ಒಂದೊಂದು ವಿಶೇಷ ತಪಾಸಣೆಗಳನ್ನು ಅಳವಡಿಸಿಕೊಂಡು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಆರೋಗ್ಯ ಸೇವೆ ನೀಡುತ್ತಾ ಬರುತ್ತಿದೆ. ಈ ಶಿಬಿರದಲ್ಲಿ ಪುತ್ತೂರು ಹಾಗೂ ಸುಳ್ಯದ ವೈದ್ಯರುಗಳು, ಹಲವು ಔಷಧ ಕಂಪನಿಗಳು, ಲ್ಯಾಬ್‌ಗಳು, ಜನೌಷಧ ಕೇಂದ್ರಗಳು ಕೈಜೋಡಿಸುತ್ತಿದೆ.
ಈ ಭಾರಿಯ ಶಿಬಿರದಲ್ಲಿ ವಿಶೇಷವಾಗಿ ಮಂಗಳೂರಿನ ಓಮೇಗ ಆಸ್ಪತ್ರೆ ಹಾಗೂ ಮಂಗಳೂರು ಹಾರ್ಟ್‌ಸ್ಕ್ಯಾನ್ ಫೌಂಡೇಶನ್‌ನ ಸಹಯೋಗದಲ್ಲಿ ಉಚಿತ ಹೃದಯ ತಪಾಸಣೆಯು ನಡೆಯಲಿದೆ. ಮಂಗಳೂರಿನ ಹಿರಿಯ ಹೃದ್ರೋಗ ತಜ್ಞ ವೈದ್ಯರಾದ ಡಾ.ಮುಕುಂದ್, ಡಾ. ಮೇಘನಾ ಮುಕುಂದ್ ಹಾಗೂ ಡಾ.ಅಮಿತ್ ಕಿರಣ್ ಹೃದಯ ತಪಾಸಣೆ ನಡೆಸಲಿದ್ದಾರೆ. ಜೊತೆಗೆ ವೈದ್ಯಕೀಯ ತಜ್ಞ ಡಾ.ಸುರೇಶ್ ಪುತ್ತೂರಾಯ, ಕೀಲು ಮತ್ತು ಎಲುಬು ತಜ್ಞ ವೈದ್ಯ ಡಾ.ಸಚಿನ್ ಶಂಕರ್ ಹಾರಕರೆ, ಆಯುರ್ವೇದ ತಜ್ಞ ಡಾ.ಸಾಯಿಪ್ರಕಾಶ್ ತಪಾಸಣೆ ನಡೆಸಲಿದ್ದಾರೆ.
ಶಿಬಿರದಲ್ಲಿ ಹೃದ್ರೋಗ ತಪಾಸಣೆ, ಸಾಮಾನ್ಯ ವೈದ್ಯಕೀಯ ತಪಾಸಣೆ, ಕೀಲು ಮತ್ತು ಎಲುಬು ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಅಎ, ಇಅಊಔ, ಮಧುಮೇಹ ರಕ್ತ ಪರೀಕ್ಷೆ, ಥೈರಾಯ್ಡ್ ಪರೀಕ್ಷೆ ಹಾಗೂ ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು. ಶಿಬಿರವು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ನಡೆಯಲಿದೆ. ದೇವಸ್ಥಾನದ ಭಕ್ತಾದಿಗಳು ಶಿಬಿರ ಪ್ರಯೋಜನ ಪಡೆದುಕೊಳ್ಳುವಂತೆ ಆರೋಗ್ಯ ರಕ್ಷಾ ಸಮಿತಿ ಹಾಗೂ ದೇವಸ್ಥಾನದ ಪ್ರಕಟಣೆ ತಿಳಿಸಿದೆ.