ಅಧ್ಯಕ್ಷರಾಗಿ ತಿರುಮಲೇಶ್ವರ ನಾಯ್ಕ್ – ಉಪಾಧ್ಯಕ್ಷರಾಗಿ ರೂಪ ಕೆ.ವಿ ಆಯ್ಕೆ
ವಿಟ್ಲ: ಅಳಕೆಮಜಲು ಕಿ.ಪ್ರಾ ಶಾಲಾ ನೂತನ ಎಸ್.ಡಿ.ಎಂ.ಸಿ. ಸಮಿತಿ ರಚನೆಯು ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ಸಫಲ್ಯ ಹಾಗೂ ಸದಸ್ಯರಾದ ಚಿದಾನಂದ ಪೆಲತ್ತಿಂಜ ರವರ ಉಪಸ್ಥಿತಿಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ತಿರುಮಲೇಶ್ವರ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ರೂಪ ಕೆ.ವಿ. ಆಯ್ಕೆಯಾದರು. ಸದಸ್ಯರಾಗಿ ರಮೇಶ್, ರೇವತಿ, ವಾರಿಜಾ,ಸುಕುಮಾರ, ಜಯಶ್ರೀ, ಗಿರೀಶ, ಭವ್ಯ ಪೆಲತ್ತಿಂಜ, ಮಾಲತಿ, ಖಲಂದರ್ ಶಾಫಿ, ಶಮೀಮ, ರುಕ್ಯ, ಶಮೀಮ ಬಾನು, ಫಾತಿಮಾ, ಜಮೀಲ, ಅಶ್ವಿನಿ, ಮಿಶ್ರಿಯರವರು ಆಯ್ಕೆಯಾದರು. ಪದನಿಮಿತ್ತ ಸದಸ್ಯರಾಗಿ ಶಾಲಾ ಮುಖ್ಯೋಪಾಧ್ಯಾಯರಾದ ಇಸ್ಮಾಯಿಲ್, ಆರೋಗ್ಯ ಕಾರ್ಯಕರ್ತೆ ಸೆಲ್ವಿ,ಅಂಗನವಾಡಿ ಕಾರ್ಯಕರ್ತೆ ಉಷಾ ರವರು ಆಯ್ಕೆಯಾದರು. ನಾಮ ನಿರ್ದೇಶಿತ ಸದಸ್ಯರಾಗಿ ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪದ್ಮನಾಭ ಸಫಲ್ಯ, ಶಿಕ್ಷಣ ತಜ್ಞರಾದ ರಮೇಶ್ ಎಂ ಬಾಯಾರ್ ಆಯ್ಕೆಯಾದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಮೇಶ್ ಎಂ. ಬಾಯಾರು ರವರು ಮಕ್ಕಳನ್ನು ತಿದ್ದುವುದರಲ್ಲಿ ಹೆತ್ತವರ ಪಾತ್ರದ ಕುರಿತಾಗಿ ಮಾಹಿತಿ ನೀಡಿದರು. ಹೆತ್ತ ವರ ಜವಾಬ್ದಾರಿಗಳ ಬಗ್ಗೆ ಶಿಕ್ಷಕಿ ರಾಜೀವಿರವರು ಮಾಹಿತಿ ನೀಡಿದರು.
ಶಾಲಾ ಶಿಕ್ಷಕಿ ಜ್ಯೋತಿ ಸ್ವಾಗತಿಸಿ, ಜಯಂತಿ ನಾಯ್ಕ ವಂದಿಸಿದರು. ಶಿಕ್ಷಕಿಯರಾದ ಬಲ್ಕೀಸ್ ಹಾಗೂ ದಿವ್ಯ ಸಹಕರಿಸಿದರು.