ಪುತ್ತೂರು ತಾಲೂಕು ಕಚೇರಿಯಲ್ಲಿ ಆಧಾರ್ ಕೇಂದ್ರ ಉದ್ಘಾಟನೆ

0

ಬೆಳಿಗ್ಗೆ 5 ಗಂಟೆಗೆ ಎದ್ದು ಆಧಾರ್ ಕಾರ್ಡು ಮಾಡಲು ಅಂಚೆ ಕಚೇರಿಯಲ್ಲಿ ಕ್ಯೂ ನಿಲ್ಲಬೇಡಿ- ತಾಲೂಕು ಕಚೇರಿಯಲ್ಲೇ ಆಧಾರ್ ವ್ಯವಸ್ಥೆ : ಶಾಸಕ ಅಶೋಕ್ ರೈ

ಪುತ್ತೂರು:ತಾಲೂಕು ಆಡಳಿತ ಸೌಧದ ಕೆಲ ಅಂತಸ್ಥಿನಲ್ಲಿ ಪ್ರಾರಂಭಿಸಲಾದ ಆಧಾರ್ ಕೇಂದ್ರವು ಜು.6ರಂದು ಉದ್ಘಾಟನೆಗೊಂಡಿತು.
ಆಧಾರ್ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕು ಕಚೇರಿಯಲ್ಲಿ ಆಧಾರ್ ಕೇಂದ್ರವನ್ನು ತೆರೆಯಲಾಗಿದೆ. ಆಧಾರ್ ಕಾರ್ಡ್ ತೆರಯಲಾಗಿದೆ. ಇನ್ನು ಮುಂದೆ ಆಧಾರ್ ಮಾಡಿಸಲು ಬೆಳಿಗ್ಗೆ 5 ಗಂಟೆಗೆ ಎದ್ದು ಬಂದು ಅಂಚೆ ಕಚೇರಿ, ಬ್ಯಾಂಕ್‌ನ ಮುಂದೆ ಸಾಲು ನಿಲ್ಲಬೇಕಾದ ಅಗತ್ಯವಿಲ್ಲ. ಆಧಾರ್ ಕೇಂದ್ರದಲ್ಲಿ 18 ವರ್ಷದೊಳಗಿನವರಿಗೆ ಹೊಸ ಆಧಾರ್ ಮಾಡಿಸಲು ಅವಕಾಶವಿದೆ. 18 ವರ್ಷ ಮೇಲ್ಪಟ್ಟವರ ಆಧಾರ್ ನಂಬರ್, ವಿಳಾಸ ತಿದ್ದುಪಡಿ ಸೇರಿದಂತೆ ತಿದ್ದುಪಡಿ ಮಾಡಲು ಅವಕಾಶವಿದೆ. ಹೊಸ ಆಧಾರ್ ಕಾರ್ಡ್ ನೊಂದಾವಣೆ, ತಿದ್ದುಪಡಿಗಳಿಗೆ ಜನರಿಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದ್ದು ಮಂಗಳೂರಿನಲ್ಲಿದ್ದ ಕೇಂದ್ರವನ್ನು ಪುತ್ತೂರಿನಲ್ಲಿಯೂ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಹೊಸ ಕಾರ್ಡ್ ಮಾಡಿಸುವ ಅವಕಾಶ ನೀಡುವ ಯೋಜನೆಯಿದೆ. ಈಗ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮುಂದೆ ಸರಕಾದಿಂದ ಸಿಬಂದಿ ನೇಮಕವಾದ ನಂತರ ಪ್ರಾರಂಭಿಸಲಾಗುವುದು. ಈ ಸೌಲಭ್ಯವನ್ನು ಜನರು ಸದುಪಯೋಗಪಡಿಸಿಕೊಳ್ಳುವಂತೆ ಅವರು ತಿಳಿಸಿದರು.

ತಹಶಿಲ್ದಾರ್ ಪುರಂದರ್ ಹೆಗ್ಡೆ ಸ್ವಾಗತಿಸಿ, ವಂದಿಸಿದರು. ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ನಗರ ಸಭಾ ಮಾಜಿ ಸದಸ್ಯ ಅನ್ವರ್ ಖಾಸಿಂ, ಮುರಳೀಧರ ರೈ ಮಠಂತಬೆಟ್ಟು, ಲ್ಯಾನಿಮಸ್ಕರೇನಸ್, ಫಾರೂಕ್ ಬಯಬೆ, ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here