ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಆಡಳಿತ ಸಮಿತಿಗೆ ಆಯ್ಕೆ

0

ಅಧ್ಯಕ್ಷ: ಮೋನಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ: ನೇಮಿರಾಜ್ ರೈ, ಕೋಶಾಧಿಕಾರಿ: ರಾಜ್‌ಪ್ರಕಾಶ್ ರೈ

ಪುತ್ತೂರು: ಕುಂಬ್ರ ಶ್ರೀ ರಾಮ ಭಜನಾ ಮಂದಿರದ ವಾರ್ಷಿಕ ಮಹಾಸಭೆಯು ಮಂದಿರದ ಅಧ್ಯಕ್ಷರಾದ ಅರೆಪ್ಪಾಡಿ ಪದ್ಮನಾಭ ರೈಯವರ ಅಧ್ಯಕ್ಷತೆಯಲ್ಲಿ ಜು.7ರಂದು ಭಜನಾ ಮಂದಿರದಲ್ಲಿ ನಡೆಯಿತು.


ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಕೋಶಾಧಿಕಾರಿ ಕುಂಬ್ರ ರಾಜ್ ಪ್ರಕಾಶ್ ರೈಯವರು ಮಂಡಿಸಿದರು. ನಂತರ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು. ನಿಕಟ ಪೂರ್ವ ಅಧ್ಯಕ್ಷರಾಗಿ ಅರೆಪ್ಪಾಡಿ ಪದ್ಮನಾಭ ರೈ, ಅಧ್ಯಕ್ಷರಾಗಿ ಮೋನಪ್ಪ ಪೂಜಾರಿ ಬಡೆಕ್ಕೋಡಿ, ಉಪಾಧ್ಯಕ್ಷರಾಗಿ ರತನ್ ರೈ ಕುಂಬ್ರ, ಪ್ರಧಾನ ಕಾರ್ಯದರ್ಶಿಯಾಗಿ ನೇಮಿರಾಜ್ ರೈ ಕುರಿಕ್ಕಾರ, ಜೊತೆ ಕಾರ್ಯದರ್ಶಿಯಾಗಿ ಆಶಾ ಮಾಧವ ರೈ ಕುಂಬ್ರ, ಕೋಶಾಧಿಕಾರಿಯಾಗಿ ಕುಂಬ್ರ ರಾಜ್ ಪ್ರಕಾಶ್ ರೈ, ಗೌರವ ಲೆಕ್ಕ ಪರಿಶೋಧಕರಾಗಿ ಚಂದ್ರಕಾಂತ ಶಾಂತಿವನ, ವಾರದ ಭಜನಾ ಸಂಚಾಲಕರುಗಳಾಗಿ ದಿವಾಕರ ಶೆಟ್ಟಿ ಮೂಕಾಂಬಿಕಾ ಕುಂಬ್ರ ಹಾಗೂ ಜಗನ್ನಾಥ ಪೂಜಾರಿ ಮುಡಾಲ, ಶ್ರೀ ಕೃಷ್ಣ ಜನ್ಮಾಷ್ಠಮಿಯ ಸಂಚಾಲಕರಾಗಿ ಉದಯ ಮಡಿವಾಳ ಕುಂಬ್ರ, ಗಣೇಶೋತ್ಸವದ ಸಂಚಾಲಕರಾಗಿ ರಾಜೇಶ್ ರೈ ಪರ್ಪುಂಜ, ಕನ್ಯಾಸಂಕ್ರಮಣ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಸಂಚಾಲಕರಾಗಿ ಉಮೇಶ್ ಕುಮಾರ್ ಬರೆಮೇಲು, ಆಯುಧ ಪೂಜೆ ಸಂಚಾಲಕರಾಗಿ ಚಿರಾಗ್ ರೈ ಬೆದ್ರುಮಾರ್, ವಾರ್ಷಿಕೋತ್ಸವದ ಯಕ್ಷಗಾನ ಬಯಲಾಟದ ಸಂಚಾಲಕರಾಗಿ ಅಂಕಿತ್ ರೈ ಕುಯ್ಯಾರು ಭಜನಾ ಮಂಗಲೋತ್ಸವದ ಸಂಚಾಲಕರಾಗಿ ಅರುಣ್ ರೈ ಬಿಜಳ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಸಂಚಾಲಕರಾಗಿ ಅರೆಪ್ಪಾಡಿ ಪದ್ಮನಾಭ ರೈರವರುಗಳನ್ನು ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಮಾಜಿ ಅಧ್ಯಕ್ಷರುಗಳಾದ ಕುಂಬ್ರ ದುರ್ಗಾಪ್ರಸಾದ್ ರೈ ಮತ್ತು ಉಮೇಶ್ ಕುಮಾರ್ ಬರೆಮೇಲು ಕಾರ್ಯನಿರ್ವಹಿಸಿದರು. ಸಭೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಬಾಬು ಪೂಜಾರಿ ಬಡೆಕ್ಕೋಡಿ, ಕರುಣಾ ರೈ ಬಿಜಳ, ಶೇಖರ್ ರೈ ಕುರಿಕ್ಕಾರ, ಮತ್ತು ಮಾಜಿ ಪದಾಧಿಕಾರಿಗಳು ಹಾಗೂ ಸದಸ್ಯರುಗಳಾದ ಪುರಂದರ ಶೆಟ್ಟಿ ಮುಡಾಲ, ಪುರಂದರ ರೈ ಕುಯ್ಯಾರು, ಮಾಧವ ರೈ ಕುಂಬ್ರ, ಆನಂದ ರೈ ಡಿಂಬ್ರಿ, ಮೇಘರಾಜ್ ರೈ ಮುಡಾಲ, ಅಶೋಕ ಪೂಜಾರಿ ಬಡೆಕ್ಕೋಡಿ, ಚಂದ್ರಶೇಖರ ರೈ ಕುರಿಕ್ಕಾರ, ಮೇಗಿನಗುತ್ತು ಸಂತೋಷ್ ರೈ ಕುಂಬ್ರ, ಸಂಭ್ರಮ್ ರೈ ಬಿಜಳ, ಸಂದೇಶ್ ಶೆಟ್ಟಿ ಮೂಕಾಂಬಿಕಾ ಕುಂಬ್ರ, ಕೃತಿಕ್ ರೈ ಅಮೈ ಮತ್ತಿತರರು ಉಪಸ್ಥಿತರಿದ್ದರು. ಅಧ್ಯಕ್ಷ ಅರೆಪ್ಪಾಡಿ ಪದ್ಮನಾಭ ರೈ ಸ್ವಾಗತಿಸಿ ನೂತನ ಅಧ್ಯಕ್ಷ ಮೋನಪ್ಪ ಪೂಜಾರಿ ಬಡೆಕ್ಕೋಡಿ ಸಹಕಾರ ಕೋರಿದರು. ಪ್ರಧಾನ ಕಾರ್ಯದರ್ಶಿ ನೇಮಿರಾಜ್ ರೈ ಕುರಿಕ್ಕಾರ ವಂದಿಸಿದರು.

LEAVE A REPLY

Please enter your comment!
Please enter your name here