ಉಪ್ಪಿನಂಗಡಿ: ಮೂಲತಃ ಇಲ್ಲಿನ ಮಠ ನಿವಾಸಿಯಾಗಿರುವ, ಪ್ರಸ್ತುತ ಬಿ.ಸಿ.ರೋಡ್‌ನಲ್ಲಿ ವಾಸ್ತವ್ಯವಿರುವ ನಝೀರ್ (54) ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ರಾತ್ರಿ ತುಂಬೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಮಠ ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಇದಿನಬ್ಬ ಹಾಜಿ ಮಠ ಅವರ ಪುತ್ರರಾಗಿದ್ದು, ಕಾಂಗ್ರೆಸ್ ಮುಖಂಡ ನಝೀರ್ ಮಠ ಅವರ ಸೋದರ ಸಂಬಂಧಿ. ಇವರ ಮೃತದೇಹವನ್ನು ಮಠದಲ್ಲಿರುವ ಇವರ ತರವಾಡು ಮನೆಗೆ ತಂದು, ಅಂತಿಮ ದರ್ಶನಕ್ಕಿಡಲಾಗಿದೆ. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.