ಹಳೆ ಪ್ರಕರಣ: ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

0

ಪುತ್ತೂರು:11 ವರ್ಷಗಳ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿ 9 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.

ಹರ್ಯಾಣದ ಮೆಹನುವಾಡ್ ಜಿಲ್ಲೆಯ ನಗೀನ ತಾಲೂಕು ನಂಗಲ್ ಮವರಿಪುರ್ ಅಹಮ್ಮದ್ ಖಾನ್ ಎಂಬವರ ಪುತ್ರ ಮಹಮ್ಮದ್ ನಾಸೀರ್ (35ವ.)ಬಂಧಿತ ಆರೋಪಿ. 2013ರಲ್ಲಿ ನಡೆದ ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸರು ಕಲಂ 341, 353,332,279 ಐಪಿಸಿಯಡಿ ಪ್ರಕರಣ(133/2013) ದಾಖಲಿಸಿಕೊಂಡಿದ್ದರು.ಕಳೆದ 9 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನಕ್ಕೆ ವಾರಂಟ್ ಜಾರಿಯಾಗಿತ್ತು. ಪುತ್ತೂರು ಗ್ರಾಮಾಂತರ ಠಾಣೆಯ ನಿರೀಕ್ಷಕ ರವಿ ಬಿ.ಎಸ್.,ಎಸ್.ಐ.ಜಂಬೂರಾಜ್ ಮಹಾಜನ್ರ ವರ ಮಾರ್ಗದರ್ಶನದಲ್ಲಿ ಎಎಸ್‌ಐ ಪರಮೇಶ್ವರ್, ಹೆಡ್‌ ಕಾನ್‌ ಸ್ಟೇಬಲ್ ಮಧು ಕೆ.ಎನ್., ಕಾನ್‌ಸ್ಟೇಬಲ್‌ ಮಂಜುನಾಥ್‌ರವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here