ಸವಣೂರು : ಸವಣೂರು ಗ್ರಾಮದ ಆರೇಲ್ತಡಿ ಕೆಡೆಂಜೊಡಿತ್ತಾಯ ದೈವಸ್ಥಾನದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಭಕ್ತಾದಿಗಳ ಸಭೆ ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆರೇಲ್ತಡಿ ದೈವಸ್ಥಾನದ ನೇಮೋತ್ಸವ ಸಮಿತಿ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಕಿನಾರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಜೀರ್ಣೋದ್ದಾರ ಸಮಿತಿ ರಚನೆ ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸಲಹೆ ಸೂಚನೆ, ಚರ್ಚೆ ನಡೆಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಸಿ ಮುಂದಿನ ಎಪ್ರಿಲ್ ತಿಂಗಳಲ್ಲಿ ಪ್ರತಿಷ್ಠೆ ನಡೆಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದರು. ನೇಮೋತ್ಸವ ಸಮಿತಿ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಪ್ರಸ್ತಾವನೆಗೈದು, ಅಷ್ಟಮಂಗಲ ಚಿಂತನೆಯಲ್ಲಿ ಕಂಡು ಬಂದ ವಿಚಾರಗಳನ್ನು ತಿಳಿಸಿ, ದೈವಜ್ಞರು ಸೂಚಿಸಿದ ಪರಿಹಾರ ಕಾರ್ಯಗಳ ನಡೆಸುವ ಕುರಿತು ತಿಳಿಸಿದರು.
ಸಭೆಯಲ್ಲಿ ಪೂರ್ಣಪ್ರಮಾಣದ ಜೀರ್ಣೋದ್ಧಾರ ಸಮಿತಿಗೆ ಪದಾಧಿಕಾರಿಗಳನ್ನು ಮಾಡಲಾಯಿತು. ಸಭೆಯಲ್ಲಿ ಹರಿಶ್ಚಂದ್ರ ಕಾಯರ್ಗ, ಗಿರಿಧರ ಇಡ್ಯಾಡಿ, ಹರೀಶ್ ಕುಕ್ಕುಜೆ, ತೀರ್ಥರಾಮ ಕೆಡೆಂಜಿ, ಈಶ್ವರ ಗೌಡ ಕಾಯರ್ಗ, ಸುಂದರ ಗೌಡ ಕಾಯರ್ಗ, ಪ್ರಕಾಶ್ ಕುದ್ಮನಮಜಲು, ಚಂದ್ರಶೇಖರ ಪಟ್ಟೆ, ಮೋನಪ್ಪ ಗೌಡ ಇಡ್ಯಾಡಿ, ಸುಂದರ ಪೂಜಾರಿ ಮಡಕೆ, ಜಯಪ್ರಕಾಶ್ ಊರುಸಾಗು, ಜಗದೀಶ್ ಇಡ್ಯಾಡಿ, ರವೀಂದ್ರ, ವಿಠಲ ಶೆಟ್ಟಿ ಕೆಡೆಂಜಿ, ವಿಶ್ವನಾಥ ಪೂಜಾರಿ ಏರ್ತಿಲ, ಬಾಲಚಂದ್ರ ರೈ ಕೆರೆಕ್ಕೋಡಿ, ರಾಜೇಶ್ ಇಡ್ಯಾಡಿ, ಗಂಗಾಧರ ಪೆರಿಯಡ್ಕ, ಆನಂದ ಕೇಕುಡೆ, ಲಿಂಗಪ್ಪ ಗೌಡ ಕುದ್ಮನಮಜಲು, ಚಂದ್ರಶೇಖರ ಮೆದು, ದಿವಾಕರ ಬಸ್ತಿ, ಆನಂದ ಇಡ್ಯಾಡಿ, ಜತ್ತಪ್ಪ ಗೌಡ ಆರೇಲ್ತಡಿ, ಮೋನಪ್ಪ ಆರೇಲ್ತಡಿ, ಗೋಪಾಲಕೃಷ್ಣ ಆರೇಲ್ತಡಿ, ಮನೋಹರ ಗೌಡ ಇಡ್ಯಾಡಿ, ಮಿಥುನ್ ಅಗರಿ, ವೆಂಕಟೇಶ ಇಡ್ಯಾಡಿ, ಕಾಂತು ನಲಿಕೆ, ಮನೋಜ್ ಕುಕ್ಕುಜೆ, ಮೋನಪ್ಪ ಗೌಡ ಆರೇಲ್ತಡಿ, ಪರಮೇಶ್ವರ ಮಡಿವಾಳ ಮೊದಲಾದವರಿದ್ದರು. ಸವಣೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ವಂದಿಸಿದರು.