ಫಿಲೋ ಗಣಪನಿಗೆ 42ರ ಸಂಭ್ರಮ- ನೂತನ ಪೀಠ ಸಮರ್ಪಣೆ, ವಿಗ್ರಹ ಮುಹೂರ್ತ

0

ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗೊಳಪಟ್ಟ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಗಣೇಶೋತ್ಸವದ ಅಂಗವಾಗಿ ಜು.9 ರಂದು ಪುತ್ತೂರು ಪರ್ಲಡ್ಕದ ಏಕದಂತ ವಠಾರದಲ್ಲಿ ಪೂಜಾ ಕಾರ್ಯದೊಂದಿಗೆ ಫಿಲೋ ಗಣಪನಿಗೆ ನೂತನ ಪೀಠ ಸಮರ್ಪಣೆ, ಬಳಿಕ ನಡೆದ ವಿಗ್ರಹ ರಚನೆಕಾರ ತಾರಾನಾಥ ಆಚಾರ್ಯರವರ ನೇತೃತ್ವದಲ್ಲಿ ವಿಗ್ರಹ ಮುಹೂರ್ತ ಜರಗಿತು.


ಈ ಸಂದರ್ಭಲ್ಲಿ ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ಟ್ರಸ್ಟಿಗಳಾದ ನಾಗೇಶ್ ಪೈ, ದುರ್ಗಾಪ್ರಸಾದ್, ದೇಲಂತಿಮಾರು ನಿತ್ಯಾನಂದ ಶೆಟ್ಟಿ, ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಮಿತ್ರರಾದ ಸೃಜನ್ ರೈ, ಸುಹಾಸ್ ಪ್ರಭು, ಸುಧೀಂದ್ರ, ಅನ್ವಿತ್ ರೈ, ಶ್ರೇಯಸ್ ರೈ, ಸಿಂಚನಾ, ಜಿತೇಶ್, ಸಿಂಚನ್, ಮೋಕ್ಷಿತ್, ಹವ್ಯಾಸ್, ಕ್ರಿಶಿಲ್, ಲತೇಶ, ಶ್ರೇಯಸ್, ಶಬರೀಸ್, ಸುಜನ್, ರಿಶಿಕಾ, ಲಿಖಿತಾ, ರಚಿತಾ, ಸಮೃದ್ಧಿ ಶೆಣೈ, ಆದಿತ್ಯಾ ಪಿ.ವಿ, ಅನುಶ್, ಶಿವಪ್ರಸಾದ್, ಹಿರಿಯ ವಿದ್ಯಾರ್ಥಿಗಳಾದ ವಿಖೇಶ್,ಋತೀಂದ್ರ, ಹರ್ಷ, ಸುಕುಮಾರ್, ಆಶ್ಲೇಶ್, ಸಿದ್ಧಾಂತ್, ಪ್ರಜ್ವಲ್ ಮುಕ್ರಂಪಾಡಿ ಸಹಿತ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here