ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪುತ್ತೂರು ವಾರ್ಷಿಕ ಮಹಾಸಭೆ

0

ಪುತ್ತೂರು: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪುತ್ತೂರು ವಾರ್ಷಿಕ ಮಹಾಸಭೆ ಜು.6ರಂದು ನಡೆಯಿತು. ಸಮಾರಂಭವನ್ನು ಮಂಗಳೂರು ಸ್ಕೌಟ್ ವಿಭಾಗ ಆಯುಕ್ತ ಮಹಮ್ಮದ್ ತುಂಬೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆಗೈದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ಆರ್ ಮಾತನಾಡಿ ಸ್ಕೌಟ್ ಮತ್ತು ಗೈಡ್ಸಿಗೆ ಇಲಾಖೆಯ ಸಂಪೂರ್ಣ ಸಹಕಾರ ಇದೆ ಎಂದರು. ಅತಿಥಿಗಳಾದ ಪುತ್ತೂರು ಸ್ಥಳೀಯ ಸಂಸ್ಥೆ ನೋಡಲ್ ಅಧಿಕಾರಿ ಸುಂದರ ಗೌಡ ,ಮಂಗಳೂರು ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್ ,ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ , ಪುತ್ತೂರು ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಝೆವಿಯರ್ ಡಿಸೋಜಾ ,ಪುತ್ತೂರು ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಉಮಾ ಪ್ರಸನ್ನ ಕಾರ್ಯಕ್ರಮದ ಕುರಿತು ಮಾತನಾಡಿದರು.

ನಗರಸಭೆಯಿಂದ 10,000ರೂ ,ತಾಲೂಕು ಪಂಚಾಯತಿನಿಂದ 10,000ರೂ ಮತ್ತು 17 ಗ್ರಾಮ ಪಂಚಾಯಿತಿಗಳಿಂದ 5,000ರೂ ನಂತೆ ಸರಕಾರಿದಿಂದ ಬರುವ ಅನುದಾನವನ್ನು ನೀಡಿದವರನ್ನು ಸ್ಮರಣಿಕೆ,ಕೃತಜ್ಞತಾ ಪತ್ರ, ಪುಷ್ಪ ವನ್ನು ನೀಡಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ರೆವೆರೆಂಡ್ ಫಾದರ್ ವಿಜಯ ಹಾರ್ವಿನ್ ಗೌರವಿಸಿದರು.

ಅಂತರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಗ್ರಾಂಡ್ ಚಿನ್ನದ ಪದಕ ಪಡೆದ ರೇಂಜರ್ ಆಪ್ತ ಚಂದ್ರಮತಿ ಮುಳಿಯ, ಎಂ ಎಸ್ ಸಿ ಇಂಡಸ್ಟ್ರಿಯಲ್ ಕೆಮೆಸ್ಟ್ರಿಯಲ್ಲಿ ದ್ವಿತೀಯ ಸ್ಥಾನ ಪಡೆದ ರೇಂಜರ್ ಶಿಲ್ಪಾ, ಎಂ ಎಸ್ ಸಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪ್ರಥಮ ರ‍್ಯಾಂಕ್ ಬಂದ ರೋವರ್ ಚಂದ್ರಾಕ್ಷ ,ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸ್ಕೌಟ್ ಗೈಡ್ ಶಿಕ್ಷಣವನ್ನು ಬೋಧಿಸಿದ ನಿವೃತ್ತ ಶಿಕ್ಷಕಿ ಸುನೀತಾ , ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಪೆ ಮಜಲು ಇಲ್ಲಿನ ನಿವೃತ್ತ ಮುಖ್ಯಗುರು ತೆರೇಸ ಸಿಕ್ವೇರಾ , ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೆವರೆಂಡ್ ಫಾದರ್ ವಿಜಯ ಹಾರ್ವಿನ್ ಅವರನ್ನು ಸನ್ಮಾನಿಸಲಾಯಿತು.ಪ್ರೀ.ಏ.ಎಲ್. ಟಿ.ತರಬೇತಿಯನ್ನು ಪಡೆದ ರೇಂಜರ್ ಲೀಡರ್ ದೀಪಿಕಾ, ಗೈಡ್ ಕ್ಯಾಪ್ಟನ್ ವೇದಾವತಿ, ಗೈಡ್ಡ್ ಕ್ಯಾಪ್ಟನ್ ಮೇಬಲ್ ಡಿಸೋಜಾ ಇವರನ್ನು ಮಹಮದ್ ತುಂಬೆ ಜಿಲ್ಲಾ ಆಯುಕ್ತರು (ಸ್ಕೌಟ್ ವಿಭಾಗ ) ಅಭಿನಂದಿಸಿದರು.

ಗೈಡ್ ಕ್ಯಾಪ್ಟನ್ ಸುನಿತಾ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿದರು. ಐವಿ ಗ್ರೇಟ್ಟ ಪಾಯ್ಸ್ ರವರು ಮುಂಗಡ ಲೆಕ್ಕಪತ್ರವನ್ನು ಮಂಡಿಸಿದರು. ಗೈಡ್ ಕ್ಯಾಪ್ಟನ್ ಪ್ರಫುಲ್ಲ ವಾರ್ಷಿಕ ಕ್ರಿಯಾ ಯೋಜನೆಯನ್ನು ವಾಚಿಸಿದರು.

ವೇದಿಕೆಯಲ್ಲಿ ಸಂತೋಷ್ ಕುಮಾರ್ ನಗರಸಭಾ ಸದಸ್ಯರು ಪುತ್ತೂರು,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಳುವಾರು ಮುಖ್ಯ ಗುರು ಸವಿತಾ,ಪುತ್ತೂರು ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಡಾಕ್ಟರ್ ಪ್ರಕಾಶ್ ಉಪಸ್ಥಿತರಿದ್ದರು.

ಸ್ಥಳೀಯ ಸಂಸ್ಥೆ ಪುತ್ತೂರು ಕಾರ್ಯಾಧ್ಯಕ್ಷ ಶ್ರೀಧರ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪಿಎಂ ಶ್ರೀ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದ ಶಿಕ್ಷಕಿ ಹರಿಣಾಕ್ಷಿ ವಂದಿಸಿದರು. ಗೈಡ್ ಕ್ಯಾಪ್ಟನ್ ವೇದಾವತಿ ಕಾರ್ಯಕ್ರಮ ನಿರೂಪಿಸಿದರು. ಗೈಡ್ ಕ್ಯಾಪ್ಟನ್ ಗಳಾದ ಪ್ರಫುಲ್ಲ, ದೀಪಿಕಾ, ಗೀತಾ ಆಚಾರ್ಯ, ಮೈತ್ರೇಯಿ, ಐವಿ ಗ್ರೇಟ್ಟಾ ಪಾಯ್ಸ್ ಸಹಕರಿಸಿದರು.

LEAVE A REPLY

Please enter your comment!
Please enter your name here