ಅಂತರಾಷ್ಟ್ರೀಯ ಜೀವ ರಕ್ಷಕ ವಿಶ್ವ ಚಾಂಪಿಯನ್ ಶಿಪ್: ಫಿಲೋಮಿನಾ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ

0

ಪುತ್ತೂರು: ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿ ಇವರು ಆಯೋಜಿಸಿದ 2024ನೇ ರಾಷ್ಟ್ರಮಟ್ಟದ ಜೀವ ರಕ್ಷಕ ವಿಶ್ವ ಚಾಂಪಿಯನ್ ಶಿಪ್  ಅಂತರಾಷ್ಟ್ರ ಮಟ್ಟದ ಆಯ್ಕೆ ಶಿಬಿರದಲ್ಲಿ  ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಮೂರು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.


ಪ್ರಥಮ ವಿಜ್ಞಾನ ವಿಭಾಗದ ದಿಗಂತ್ ವಿ ಎಸ್ , ಆರ್ ಅಮನ್ ರಾಜ್ ಹಾಗೂ ಅನ್ವಿತ್ ರೈ ಬಾರಿಕೆ ಇವರು ಆಯ್ಕೆಯಾಗಿರುತ್ತಾರೆ. ಇವರು ಆಗಸ್ಟ್ ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯುವ ಜೀವ ರಕ್ಷಕ ವಿಶ್ವ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ ಜಿ ಆರ್, ರೋಹಿತ್ ಪ್ರಕಾಶ್ ,ದೀಕ್ಷಿತ್ ರಾವ್ ಇವರು ತರಬೇತಿ ನೀಡಿರುತ್ತಾರೆ.  ದಿಗಂತ್ ವಿ ಎಸ್  ಇವರು ಕೂರ್ನಡ್ಕ ನಿವಾಸಿ ವಿಶ್ವನಾಥ್ ಎಸ್ ಹಾಗೂ ವೀಣಾ ಕುಮಾರಿ.ಕೆ ದಂಪತಿಗಳ ಪುತ್ರ, ಆರ್ ಅಮನ್ ರಾಜ್ ದರ್ಬೆ ನಿವಾಸಿ ರಾಜೇಶ್ ಹಾಗೂ ಅಶ್ವಿನಿ ರಾಜೇಶ್ ದಂಪತಿಗಳ ಪುತ್ರ ಹಾಗೂ ಅನ್ವಿತ್ ರೈ ಬಾರಿಕೆ ಇವರು ಕುಂಬ್ರ ನಿವಾಸಿ ಅನಿಲ್ ಕುಮಾರ್ ರೈ ಬಾರಿಕೆ ಹಾಗೂ ದಿವ್ಯಾ ಅನಿಲ್ ರೈ ದಂಪತಿಗಳ ಪುತ್ರನಾಗಿದ್ದಾನೆ.
ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಕ ನಿರ್ದೇಶಕ ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here