ಪುತ್ತೂರು: ಪೆರಿಗೇರಿ ಜನ ವಸತಿ ಪ್ರದೇಶದಲ್ಲಿ ಅಪಾಯಕಾರಿಯಾಗಿದ್ದ ಟ್ರಾನ್ಸ್ ಫಾರ್ಮರ್ ನ್ನು ಶಾಸಕರ ಸೂಚನೆ ಮೇರೆಗೆ ಮೆಸ್ಕಾಂ ಇಲಾಖೆ ಸ್ಥಳಾಂತರ ಮಾಡಿದೆ.
ಜನವಸತಿ ಮತ್ತು ಅರೇಬಿಕ್ ಶಾಲೆಯ ಬಳಿ ಈ ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಳವಡಿಲಾಗಿತ್ತು. ಅತ್ಯಂತ ಹಳೆಯ ವಿದ್ಯುತ್ ಕಂಬದಲ್ಲಿ ಟ್ರಾನ್ಸ್ ಫಾರ್ಮರ್ ಜೋಡನೆ ಮಾಡಿದ ಕಾರಣ ಇದರಿಂದ ಅಪಾಯ ಇದೆ ಎಂದು ಸ್ಥಳೀಯರು ಶಾಸಕರಿಗೆ ಅಲ್ಲಿಂದ ಸ್ಥಳಾಂತರ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಸಾರ್ವಜನಿಕರಿಗೆ ಅಪಾಯಕಾರಿಯಾಗಿದ್ದ ಟ್ರಾನ್ಸ್ ಫಾರ್ಮರನ್ನು ಸ್ಥಳಾಂತರ ಮಾಡಿ ಸುರಕ್ಷಿತ ಸ್ಥಳದಲ್ಲಿ ಹಾಕುವಂತೆ ಶಾಸಕರು ಮೆಸ್ಕಾಂಗೆ ಸೂಚನೆ ನೀಡಿದ್ದರು.