*ಉತ್ತಮ ರೀತಿಯಲ್ಲಿ ಬೆಳಗಲಿ – ಬಾಲಕೃಷ್ಣ ಆಚಾರ್ಯ
*ಹಿಂದುಗಳಿಗೆ ಬಹಳ ಅವಶ್ಯಕತೆ ಇರುವ ಸಂಸ್ಥೆ – ಅರುಣ್ ಕುಮಾರ್ ಪುತ್ತಿಲ
*ಧಾರ್ಮಿಕ ಕಾರ್ಯಕ್ರಮಕ್ಕೆ ಸಂಸ್ಥೆ ಇವೆಂಟ್ ಮ್ಯಾನೇಜ್‌ಮೆಂಟ್‌ನಂತಾಗಲಿ – ಸಂಜೀವ ಮಠಂದೂರು
*ಗ್ರಾಹಕನೊಂದಿಗೆ ಉತ್ತಮ ಸಂಬಂಧವಿಟ್ಟಾಗ ಯಶಸ್ವಿ – ಎನ್.ಕೆ.ಜಗನ್ನಿವಾಸ ರಾವ್
*ಉತ್ತಮ ಪಾರ್ಕಿಂಗ್ ವ್ಯವಹಾರದ ಯಶಸ್ವಿಗೆ ಕಾರಣ – ಚಿದಾನಂದ ಬೈಲಾಡಿ
ಪುತ್ತೂರು: ಪೂಜಾ ಸಾಮಾಗ್ರಿಗಳ ಮಾರಾಟ ಮಳಿಗೆ ’ಸುಭದ್ರ ಟ್ರೇಡರ‍್ಸ್’ ಜು.12ರಂದು ಪುತ್ತೂರು ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಬಿಲ್ಡಿಂಗ್‌ನಲ್ಲಿ ಶುಭಾರಂಭಗೊಂಡಿತು. ಜ್ಯೋತಿಷಿ ಬಾಲಕೃಷ್ಣ ಆಚಾರ್ಯ ಅವರ ನೇತೃತ್ವದಲ್ಲಿ ಬೆಳಿಗ್ಗೆ ಮಹಾಗಣಪತಿ ಹವನ ಮತ್ತು ಶ್ರೀ ಲಕ್ಷ್ಮಿಪೂಜೆ ನಡೆಯಿತು.
ಉತ್ತಮ ರೀತಿಯಲ್ಲಿ ಬೆಳಗಲಿ:
ಸಂಸ್ಥೆಯನ್ನು ಉದ್ಘಾಟಿಸಿದ ಜ್ಯೋತಿಷಿ ಬಾಲಕೃಷ್ಣ ಆಚಾರ್ಯ ಅವರು ಮಾತನಾಡಿ ಸಂಸ್ಥೆಯಲ್ಲಿ ಬೆಳಗಿದ ನಂದಾ ದೀಪದಂತೆ ಸಂಸ್ಥೆಯಿಂದ ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಪ್ರಯೋಜನವಾಗಲಿ. ಸಂಸ್ಥೆಯು ಉತ್ತಮ ರೀತಿಯಲ್ಲಿ ಬೆಳಗಲಿ ಎಂದು ಆಶೀರ್ವಚನ ನೀಡಿದರು.
ಹಿಂದುಗಳಿಗೆ ಬಹಳ ಅವಶ್ಯಕತೆ ಇರುವ ಸಂಸ್ಥೆ:
ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಹಿಂದುಗಳಿಗೆ ಬಹಳ ಅವಶ್ಯಕತೆ ಇರುವ ಸಂಸ್ಥೆ. ಅದೇ ರೀತಿ ಗ್ರಾಹಕರಿಗೆ ಪೂಜಾ ಸಾಹಿತ್ಯವನ್ನು ಒದಗಿಸುವ ಶಕ್ತಿಯನ್ನು ಸಂಸ್ಥೆಗೆ ಭಗವಂತನು ನೀಡಲಿ ಎಂದು ಹಾರೈಸಿದರು.
ಧಾರ್ಮಿಕ ಕಾರ್ಯಕ್ರಮಕ್ಕೆ ಸಂಸ್ಥೆ ಇವೆಂಟ್ ಮ್ಯಾನೇಜ್‌ಮೆಂಟ್‌ನಂತಾಗಲಿ :
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಧಾರ್ಮಿಕ ವಿಧಿ ವಿಧಾನಗಳನ್ನು ಹಿಂದೂಗಳು ಪೂರೈಸಬೇಕಾದರೆ ಒಂದೇ ಸೂರಿನಡಿಯಲ್ಲಿ ಎಲ್ಲಾ ಸಮಾಗ್ರಿಗಳನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಿದ ಸಂಸ್ಥೆಯ ಮಾಲಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅದೇ ರೀತಿ ಯಾವುದೇ ಕಾರ್ಯಕ್ರಮಗಳಿಗೆ ಇವೇಂಟ್ ಮ್ಯಾನೇಜ್‌ಮೆಂಟ್ ಬಹಳ ಅಗತ್ಯ. ಈ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೂ ಸುಭದ್ರ ಸಂಸ್ಥೆಯು ಇವೆಂಟ್ ಮ್ಯಾನೇಜ್‌ಮೆಂಟ್‌ನಂತೆ ಕಾರ್ಯ ನಿರ್ವಹಿಸಲಿ ಎಂದರು.
ಗ್ರಾಹಕನೊಂದಿಗೆ ಉತ್ತಮ ಸಂಬಂಧವಿಟ್ಟಾಗ ಯಶಸ್ವಿ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್ ಅವರು ಮಾತನಾಡಿ ಸಂಸ್ಥೆಯು ಗ್ರಾಹಕನೊಂದಿಗೆ ಉತ್ತಮ ಸಂಬಂಧವಿರಿಸಿದಾಗ ವ್ಯವಹಾರ ಉತ್ತಮ ರೀತಿಯಲ್ಲಿ ನಡೆಯುತ್ತದೆ. ಗ್ರಾಹಕನಿಗೆ ಏನು ಬೇಕೋ ಅದೆ ಸುವಸ್ತುಗಳು ಸಂಸ್ಥೆಯಿಂದ ಸಿಗುವಂತಾಗಲಿ ಎಂದು ಹಾರೈಸಿದರು.
ಉತ್ತಮ ಪಾರ್ಕಿಂಗ್ ವ್ಯವಹಾರದ ಯಶಸ್ವಿಗೆ ಕಾರಣ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ ಅವರು ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ಎಲ್ಲಾ ಕಡೆ ಪಾರ್ಕಿಂಗ್ ಕೊರತೆಯಿಂದ ವ್ಯವಹಾರದಲ್ಲಿ ಹಿನ್ನಡೆಯಾಗುವುದು ಸಹಜ. ಸುಭದ್ರ ಸಂಸ್ಥೆಯಲ್ಲಿ ವಿಶಾಲವಾದ ಪಾರ್ಕಿಂಗ್ ಇರುವ ಹಿನ್ನೆಲೆಯಲ್ಲಿ ಗ್ರಾಹಕರಿಗೂ ಸುಲಭವಾಗಲಿದೆ ಎಂದರು. ಶ್ರೀಕ್ಷೇತ್ರ ಹನುಮಗಿರಿಯ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಕ್ರಿಸ್ತೋಫರ್ ಕಟ್ಟಡದ ಮಾಲಕ ವಲೇರಿಯನ್ ಡಯಾಸ್ ಸಹಿತ ಹಲವಾರು ಮಂದಿ ಗಣ್ಯರು ಆಗಮಿಸಿ ಸಂಸ್ಥೆಗೆ ಶುಭ ಹಾರೈಸಿದರು. ಸಂಸ್ಥೆಯ ಮಾಲಕ ಭರತ್ ಗೌಡ ನೀರ್ಕಜೆ ಮತ್ತು ಶೇಷಪ್ಪ ಗೌಡ ನೀರ್ಕಜೆ ಅತಿಥಿಗಳನ್ನು ಸ್ವಾಗತಿಸಿದರು.
ಬ್ರಹ್ಮಕಲಶೋತ್ಸವ, ಪ್ರತಿಷ್ಠೆ ಸಹಿತ ಇತರ ಹೋಮ, ಹವನ, ಗೃಹಪ್ರವೇಶ ಕಾರ್ಯಕ್ರಮಗಳಿಗೆ ಅಗತ್ಯ ಇರುವ ಪೂಜಾ ಸಾಮಾಗ್ರಿಗಳು ನಮ್ಮಲ್ಲಿ ಮಿತದರದಲ್ಲಿ ಸಿಗುತ್ತದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇರುವುದರಿಂದ ಗ್ರಾಹಕರಿಗೆ ವಾಹನದಲ್ಲಿ ಬಂದು ಸಾಮಾಗ್ರಿಗಳನ್ನು ಸರಬರಾಜು ಮಾಡಲು ಉಪಯುಕ್ತವಾಗುತ್ತದೆ.
ಭರತ್ ಗೌಡ ನೀರ್ಕಜೆ