ಜು.14 : ಪುಣಚ ಬಳಂತಿಮೊಗರುವಿನಲ್ಲಿ ಕೆಸರ್‌ಡ್ ಒಂಜಿ ದಿನ

0

ಪುಣಚ: ಫ್ರೆಂಡ್ಸ್ ಬಳಂತಿಮೊಗರು ಇವರ ಆಶ್ರಯದಲ್ಲಿ ಚತುರ್ಥ ವರ್ಷದ ಕೆಸರ್‌ಡ್ ಒಂಜಿ ದಿನ- ಕೆಸರ್ದ ಗೊಬ್ಬುಲು ಕಾರ್ಯಕ್ರಮ ಜು.14ರಂದು ಪುಣಚ ಬಳಂತಿಮೊಗರು ದೈವಸ್ಥಾನದ ಗದ್ದೆಯಲ್ಲಿ ನಡೆಯಲಿದೆ.


ಬೆಳಿಗ್ಗೆ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಯೊಂದಿಗೆ ಆರಂಭಗೊಂಡು ಸಂಜೆ 5ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ, ಯುವಕರಿಗೆ, ಪ್ರತ್ಯೇಕವಾಗಿ ವಿವಿಧ ಸ್ಪರ್ಧೆಗಳು ನಡೆದು ಸಾಯಂಕಾಲ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಫ್ರೆಂಡ್ಸ್ ಬಳಂತಿಮೊಗರು ಇದರ ಪದಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here