ಪುತ್ತೂರು: ಮಂಗಳೂರು ಶ್ರೀನಿವಾಸ ವಿಶ್ವವಿದ್ಯಾಲಯದ ಸಂಶೋಧಕಿ ಶಕೀಲಾ ಕೆ. ಅವರು ಮಂಡಿಸಿದ್ದ ಮಹಾಪ್ರಬಂಧಕ್ಕೆ ಶ್ರೀನಿವಾಸ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ನೀಡಿ ಗೌರವಿಸಿದೆ.
ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸ್ಟ್ಯೂಟ್ ಆಫ್ ಎಜುಕೇಶನ್ನ ಅಸೋಸಿಯೇಟ್ ಫ್ರೊಫೆಸರ್ ಡಾ. ವಿಜಯಲಕ್ಷ್ಮಿ ನಾಯ್ಕ್ ರವರ ಮಾರ್ಗದರ್ಶನದಲ್ಲಿ ಶಕೀಲಾ ಕೆ. ಅವರು ‘ಎಫೆಕ್ಟಿವ್ನೆಸ್ ಆಫ್ ಕೊಲಾಬರೇಟಿವ್ ಕನ್ಸ್ಟ್ರಕ್ಟಿವಿಸ್ಟ್ ಅಪ್ರೋಜ್(ಸಿಸಿಎ) ಆಫ್ ಟೀಚಿಂಗ್ ಸೋಶಿಯಲ್ ಸೈನ್ಸ್ ಆನ್ ಲೈಫ್ ಸ್ಕಿಲ್ಸ್ ಆಂಡ್ ಸೋಶಿಯಲ್ ಕಾಂಪಿಟೆನ್ಸಿ ಅಮಂಗ್ ಸೆಕೆಂಡರಿ ಸ್ಟೂಡೆಂಟ್ಸ್ ಆಫ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್’ ಎಂಬ ಮಹಾಪ್ರಬಂಧ ಮಂಡಿಸಿದ್ದರು. ಈ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯ ಪಿಎಚ್ಡಿ(ಡಾಕ್ಟರ್ ಆಫ್ ಫಿಲಾಸಫಿ) ಪದವಿ ನೀಡಿ ಗೌರವಿಸಿದೆ.
ಮಂಗಳೂರು ಅಶೋಕನಗರದ ರಾಮಣ್ಣ ಶೆಟ್ಟಿ ಕಂಪೌಂಡ್ ನಿವಾಸಿ ಅನಿಲ್ ಕುಮಾರ್ ಅವರ ಪತ್ನಿಯಾಗಿರುವ ಶಕೀಲಾ ಕೆ. ಅವರು ಕೋಡಿಂಬಾಡಿ ಗ್ರಾಮದ ಕೆದಿಕಂಡೆಗುತ್ತು ಸೀತಾರಾಮ ಶೆಟ್ಟಿ ಮತ್ತು ಜಾನಕಿ ಶೆಟ್ಟಿ ದಂಪತಿಯ ಪುತ್ರಿ.
ಶಕೀಲಾ ಅವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಕೋಟೆಕಾರು ಆನಂದಾಶ್ರಮ ಪ್ರೌಢಶಾಲೆಯಲ್ಲಿ ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಮಂಗಳೂರಿನ ಬೆಸೆಂಟ್ ಕಾಲೇಜಿನಲ್ಲಿ ಪೂರೈಸಿದ್ದರು. ಬಳಿಕ ಎಂ.ಎ. ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದಿದ್ದ ಇವರು ಬಿಎಡ್ ಶಿಕ್ಷಣವನ್ನು ಕಾವೂರು ಎಂವಿ.ಶೆಟ್ಟ ವಿದ್ಯಾಲಯ ಮತ್ತು ಎಂ.ಎಡ್. ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪೂರೈಸಿದ್ದರು.