ದರ್ಬೆತ್ತಡ್ಕ ಅಂಚೆ ಕಚೇರಿ ಸ್ಥಳಾಂತರಗೊಂಡು ಆರಂಭ 

0

ಪುತ್ತೂರು: ದರ್ಬೆತ್ತಡ್ಕ ಶಾಖಾ ಅಂಚೆ ಕಛೇರಿಯು ಜು.13ರಂದು ಸಮೀಪದಲ್ಲಿರುವ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಅಂಚೆ ಕಛೇರಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅಂಚೆಪಾಲಕ ಯತಿರಾಜ್ ಯನ್ ಕಾರ್ಯಕ್ರಮಕ್ಕೆ ಸಹಕರಿಸಿದರು. ದರ್ಬೆತ್ತಡ್ಕ ಶಾಲಾ ಮುಖ್ಯಗುರು ಚರುಂಬ ಯು ಬಿ, ದರ್ಬೆತ್ತಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ್ ಮಾಯಿಲಕೊಚ್ಚಿ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here