ಪುತ್ತೂರು: ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ 6 ತಿಂಗಳ ಹಿಂದೆಯಷ್ಟೆ ನಿವೃತ್ತಿ ಹೊಂದಿದ್ದ ಎಂ.ಎನ್.ರಾವ್( 60ವ) ಅವರು ಜು.14ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ನಿವೃತ್ತಿಯ ಬಳಿಕವು ಇಲಾಖೆಯ ನಿಯಮದಂತೆ ಪೊಲೀಸ್ ವಸತಿ ಗೃಹದಲ್ಲೇ ವಾಸ್ತವ್ಯ ಹೊಂದಿದ್ದ ಅವರು ಸಂಪ್ಯ ಉದಯಗಿರಿಯಲ್ಲಿ ಮನೆ ಖರೀದಿಸಿ ಅದರ ನವೀಕರಣ ಕೆಲಸ ಕಾರ್ಯ ನಡೆಸುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು.
ಮೃತರ ಪತ್ನಿ ಕಾಸರಗೋಡಿನಲ್ಲಿ ಶಿಕ್ಷಕಿಯಾಗಿದ್ದು, ಪುತ್ರಿ ವೈದ್ಯಕೀಯ ಶಿಕ್ಷಣ ಕಲಿಯುತ್ತಿದ್ದಾರೆ. ಪುತ್ರ ಪಿಯುಸಿ ಕಲಿಯುತ್ತಿದ್ದಾರೆ. ಮೃತ ಎಂ.ಎನ್.ರಾವ್ ಅವರ ಮೃತ ದೇಹವನ್ನು ಜು.15ಕ್ಕೆ ಪುತ್ತೂರಿಗೆ ತರಲಾಗುವುದು ಎಂದು ತಿಳಿದು ಬಂದಿದೆ.