ಪುತ್ತೂರು:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗಳ ಜಂಟಿ ಆಶ್ರಯದಲ್ಲಿ ಒಂದು ದಿನದ ಹೊರ ಸಂಚಾರ ಹಾಗೂ ಕೈಗಾರಿಕಾ ಭೇಟಿಯ ಉದ್ಘಾಟನೆಯನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರು ಸತೀಶ್ ಕುಮಾರ್ ರೈ ನಡೆಸಿದರು.ಆ ಬಳಿಕಮಾತನಾಡಿ ಸದಾ ಸಿದ್ಧರು ಎನ್ನುವ ಸ್ಕೌಟ್ಸ್ ಮತ್ತು ಗೈಡ್ಸ್ ಧ್ಯೇಯ ವಾಕ್ಯಕ್ಕೆ ಅರ್ಥಪೂರ್ಣವಾಗಿ ಜೀವನ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮಾನವತಾವಾದಿಗಳಾಗಿ ಬದುಕ ಬೇಕು ಎಂದರು. ಧ್ವಜವನ್ನು ಅರಳಿಸುದರ ಮೂಲಕ ಹೊರ ಸಂಚಾರಕ್ಕೆ ಚಾಲನೆ ನೀಡಿದರು. ಕೆದಿಲ ಗ್ರಾಮದಲ್ಲಿರುವ ಹಾರ್ದಿಕ ಹರ್ಬಲ್ ನೀರಿನ ಕೈಗಾರಿಕಾ ಉದ್ಯಮಕ್ಕೆ ಭೇಟಿ ನೀಡಲಾಯಿತು.ಹಾರ್ದಿಕ್ ಹರ್ಬಲ್ ನೀರಿನ ಕಾರ್ಖಾನೆಯ ಮಾಲಕಮುರಳಿಧರ ಮತ್ತು ಮೀರಾ ಮುರಳಿಧರ ಹಾಗೂ ಸಿಬ್ಬಂದಿ ವರ್ಗ ನೀರಿನ ಪರಿಷ್ಕರಣೆಗೆ ಸಂಬಂಧಿಸಿದ ಯಂತ್ರಗಳ ಕಾರ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯ ಗುರು ನಳಿನಿ ವಾಗ್ಲೆ, ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯ ಗುರು ಸಂಧ್ಯಾ ಹಾಗೂ ಮಮತಾ ಇವರು ಉಪಸ್ಥಿತರಿದ್ದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹಿರಿಯ ಗೈಡ್ ಶಿಕ್ಷಕಿ ಹರಿಣಾಕ್ಷಿ. ಎ. ಸ್ವಾಗತಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಶಿಕ್ಷಕಿ ಅನುರಾಧಾ. ಎ. ಧನ್ಯವಾದ ಸಮರ್ಪಿಸಿದರು. ನಿವೇದಿತಾ ಗೈಡ್ ಕಂಪೆನಿಯ ಗೈಡ್ ಅಮೃತ. ಬಿ. ಎ ಕಾರ್ಯಕ್ರಮ ನಿರೂಪಿಸಿದರು.
ಹೊರಸಂಚಾರ ಹಾಗೂ ಕೈಗಾರಿಕಾ ಭೇಟಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಮಾಸ್ಟರ್ ದೀಪಕ್ ಹಾಗೂ ಶಿವಪ್ರಸಾದ್ ಗೈಡ್ ಕ್ಯಾಪ್ಟನ್ ಯಶಸ್ವಿನಿ ತಾಳೆಪ್ಪಾಡಿ, ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ ಶುಭಶ್ರೀ ,ಶಾಲಾ ವಾಹನ ಸಾರಥಿಗಳಾದ ಪುರಂದರ ಕೃಷ್ಣ ವಿಶ್ವಜಿತ್ ರೂಪೇಶ್ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಸ್ಕೌಟ್ ವಿದ್ಯಾರ್ಥಿ ಶ್ರೀನಿಧಿ ಸಹಕರಿಸಿದರು.