





ಪುತ್ತೂರು: ಸವಣೂರು ಅಂಬಾ ಬ್ರದರ್ಸ್ ವತಿಯಿಂದ ಸವಣೂರು ಶ್ರೀ ಪದ್ಮವತಿಯ ಅಮ್ಮನವರ ಬಸದಿ ಬಳಿ ಇರುವ ನೋಟರಿ ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್ ರವರ ಗದ್ದೆಯಲ್ಲಿ ಯಂತ್ರದ ಮುಖಾಂತರ ಭತ್ತ ನಾಟಿ ಮಾಡುವ 4ನೇ ವರ್ಷದ “ಅಂಬಾ ಗದ್ದೆಗಿಳಿಯೋಣ ಬಾ” ಕಾರ್ಯಕ್ರಮ ಜು.14ರಂದು ಜರಗಿತು. ಸವಣೂರು ಜಿನ ಬಸದಿಯ ಅರ್ಚಕ ಶ್ರೇಯಾಂಶ್ ಕುಮಾರ್ ಇಂದ್ರ ರವರು ಪೂಜಾ ವಿಧಿವಿಧಾನ ನೇರವೇರಿಸಿದರು. ಗದ್ದೆಯ ಮಾಲೀಕರಾದ ನೋಟರಿ ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್ ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ರವರುಗಳು ಶುಭಹಾರೈಸಿದರು. ಅಂಬಾ ಬ್ರದರ್ಸ್ ತಂಡದ ನಿಶ್ಚಿಲ್ ಎಂ.ರೈ , ಸುಶಾಂತ್ ನಾಯ್ಕರವರುಗಳು ಅತಿಥಿಗಳನ್ನು ಗೌರವಿಸಿದರು. ಜಯರಾಮ್ ರೈ ಮೂಡಂಬೈಲು, ಶಿಕ್ಷಿತ್ ನಾಯ್ಕ
ಸಂದೇಶ್ ಬಲ್ಯಾಯ, ಉಮೇಶ್ ಕರ್ಕೆರ್ ಉಪಸ್ಥಿತರಿದ್ದರು ನಿಭಾ ಬಿ ರೈ ಕೆರೆಕೋಡಿ ಪ್ರಾರ್ಥನೆಗೈದರು. ರಾಜ್ ದೀಪಕ್ ಶೆಟ್ಟಿ ಮಠ ಸ್ವಾಗತಿಸಿ, ಬಾಲಚಂದ್ರ ರೈ ಕೆರೆಕೋಡಿ ವಂದಿಸಿದರು.












