ರಾಮಕುಂಜ ಆ.ಮಾ.ಶಾಲಾ ಮಂತ್ರಿಮಂಡಲ ಉದ್ಘಾಟನೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರಜಾಪಭುತ್ವ ಮಾದರಿಯಲ್ಲಿ ನಡೆದ ಶಾಲಾ ಮಂತ್ರಿಮಂಡಲದ ಉದ್ಘಾಟನೆಯು ಜು.12ರಂದು ನಡೆಯಿತು.

ಶಿವಪ್ರಸಾದ್ ಇಜ್ಜಾವು ಅವರು ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಬಾರಿಂಜ ಅವರು ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರಯುತ ಜೀವನದೊಂದಿಗೆ ಸಮಾಜದಲ್ಲಿ ಉತ್ತಮ ಪ್ರಜೆಯಾಗುವ ಕಡೆಗೆ ಗಮನ ಹರಿಸಬೇಕೆಂದು ಹೇಳಿದರು. ಸಂಸ್ಥೆಯ ಕಾರ್‍ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಆಂಗ್ಲ ಭಾಷೆಯನ್ನು ಉಪಯೋಗಿಸಿಕೊಂಡು ವಿವಿಧ ಸಂಘಗಳ ಮೂಲಕ ನಾಯಕತ್ವ ಗುಣವನ್ನು ಬೆಳೆಸಿ, ದೇಶದ ಉತ್ತಮ ಪ್ರಜೆಯಾಗಬೇಕೆಂದು ಹೇಳಿದರು. ವಿದ್ಯಾಪೀಠ ಬೆಂಗಳೂರು ಇಲ್ಲಿನ ವೇದ ಪಾರಂಗತರಾದ ಅನೀಶ್ ಕುಪ್ಲಾಜೆಯವರು ವಿದ್ಯಾರ್ಥಿ ಜೀವನದಲ್ಲಿ ಭಗವದ್ಗೀತೆಯ ಮಹತ್ವವನ್ನು ತಿಳಿಸಿ, ಭಗವದ್ಗೀತೆಯು ಮಾನವೀಯ ಮೌಲ್ಯಗಳನ್ನು ಸಾರುವ ಮಹತ್ವದ ಗ್ರಂಥವಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಮೌಲ್ಯವನ್ನು ಅಳವಡಿಸುವುದೇ ಭಗವದ್ಗೀತೆಯ ಸಾರಾಂಶ ಎಂದು ಹೇಳಿದರು.

ಸಂಸ್ಥೆಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೋಹಿತಾ ಎ.ಅವರು ಶಾಲಾ ಚುನಾವಣಾ ಪ್ರಕ್ರಿಯೆ ಹಾಗೂ ಶಾಲಾ ಮಂತ್ರಿಮಂಡಲದ ಜವಾಬ್ದಾರಿಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ, ಸಂಸ್ಥೆಯ ವ್ಯವಸ್ಥಾಪಕ ರಮೇಶ್ ರೈ ಆರ್.ಬಿ ಹಾಗೂ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತಿ ಯು.ಎನ್ ಸ್ವಾಗತಿಸಿ, ಸಹಶಿಕ್ಷಕ ವಸಂತ ಕುಮಾರ್ ವಂದಿಸಿದರು. ಸಹಶಿಕ್ಷಕರಾದ ರಾಧಾಕೃಷ್ಣ ಬಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.

ಪ್ರಮಾಣ ವಚನ:
ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕರಾದ 10ನೇ ತರಗತಿಯ ಲಿಖಿತ್, ನಿತಿನ್ ಗೌಡ, ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿ ನಾಯಕಿ 7ನೇ ತರಗತಿಯ ತನ್ಮಯ್ ಎಸ್ ರೈ, ಪ್ರೌಢಶಾಲಾ ವಿಭಾಗದ ಉಪನಾಯಕಿಯರಾದ 9ನೇ ತರಗತಿಯ ಶಾರ್ವರಿ ರೈ ಕೆ, ಕಿರಣ್ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಉಪನಾಯಕಿ 6ನೇ ತರಗತಿಯ ಧೃತಿ ಕೆ.ಎ. ಹಾಗೂ ತಂಡದವರು ಪ್ರಮಾಣ ವಚನ ಸ್ವೀಕರಿಸಿದರು.

LEAVE A REPLY

Please enter your comment!
Please enter your name here