ಕುಂಬ್ರ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ವತಿಯಿಂದ ರೇಂಜ್ ವ್ಯಾಪ್ತಿಯ ಉಸ್ತಾದರುಗಳಿಗೆ ಗೌರವಾರ್ಪಣೆ

0

ಪುತ್ತೂರು: ಕುಂಬ್ರ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ವತಿಯಿಂದ ಮುಅಲ್ಲಿಂ ಡೇ ಪ್ರಯುಕ್ತ ರೇಂಜ್ ವ್ಯಾಪ್ತಿಯ ಎಲ್ಲಾ ಮದ್ರಸ ಅಧ್ಯಾಪಕರಿಗೆ ಗೌರವಾರ್ಪಣೆ ಕಾರ್ಯಕ್ರಮ ತಿಂಗಳಾಡಿ ಜಿಸ್ತಿಯಾ ಮದ್ರಸ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಮಜೀದ್ ಬಾಳಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಕರೀಂ ದಾರಿಮಿಯವರು ಪ್ರಾರ್ಥನೆಗೆ ನೇತೃತ್ವ ನೀಡಿದರು.

ಕುಂಬ್ರ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಹಸನ್ ಬಾಖವಿ ಓಲೆಮುಂಡೋವು ಉದ್ಘಾಟಿಸಿದರು. ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಸ್ ಹಂಝ ಫೈಝಿ ಕಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಬ್ಬಾಸ್ ದಾರಿಮಿ ಕೆಲಿಂಜ ಉದ್ಬೋಧನೆಗೈದರು. ನಾಸಿರ್ ಫೈಝಿ ರೆಂಜಲಾಡಿ, ಅಬ್ದುಲ್ ಖಾದರ್ ಮುಸ್ಲಿಯಾರ್ ಸಾರೆಪುಣಿ, ಅಬ್ದುಲ್ ಸತ್ತಾರ್ ಕೌಸರಿ ಜಿಸ್ತಿಯಾ ಶುಭಹಾರೈಸಿದರು.
ಸಭೆಯಲ್ಲಿ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ತಿಂಗಳಾಡಿ ಇದರ ಅಧ್ಯಕ್ಷ ಸಿದ್ದೀಕ್ ಸುಲ್ತಾನ್, ರೇಂಜ್ ಕೋಶಾಧಿಕಾರಿ ಶುಕೂರ್ ದಾರಿಮಿ, ಉಪಾದ್ಯಕ್ಷ ಇಬ್ರಾಹಿಂ ಹಾಜಿ, ಕೋಶಾಧಿಕಾರಿ ನವಾಝ್ ಪರ್ಪುಂಜ, ಕಾರ್ಯದರ್ಶಿ ಹಬೀಬ್ ಕಣ್ಣೂರು, ಬಶೀರ್ ಕೌಡಿಚ್ಚಾರು, ಹಂಝ ಎಲಿಯ , ಉಮರ್ ಶಾಲಾಬಳಿ, ಜಿಸ್ತಿಯಾ ಗೌರವಾಧ್ಯಕ್ಷ ಮಹಮ್ಮದ್ ಹಾಜಿ ಸಂತೋಷ್, ಶಾಫಿ ಬೇರಿಕೆ ಉಪಸ್ಥಿತರಿದ್ದರು.
ಸಭೆಯಲ್ಲಿ ಮುಫತ್ತಿಸ್ ಹಾಗು ರೇಂಜ್ ವ್ಯಾಪ್ತಿಯ ೩೯ ಅಧ್ಯಾಪಕರನ್ನು ಗೌರವಿಸಲಾಯಿತು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಪವಾಝ್ ಪಾಲ್ತಾಡ್ ಸ್ವಾಗತಿಸಿದರು. ಉಪಾದ್ಯಕ್ಷ ಝೈನುದ್ದೀನ್ ಹಾಜಿ ವಂದಿಸಿದರು. ಕಾರ್ಯದರ್ಶಿ ಅಶ್ರಫ್ ಸಾರೆಪುಣಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here