ಪುತ್ತೂರು: ಪಾಲ್ತಾಡಿ ಗ್ರಾಮದ ಬಂಬಿಲ ಹಾಲು ಉತ್ವಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ನಿರ್ಮಾಣವನ್ನು ಮಾಡುವ ಜಾಗದಲ್ಲಿ ಜು.20ರಂದು ಅಭಿವೃದ್ಧಿ ಕಾರ್‍ಯಕ್ಕೆ ಚಾಲನೆಯನ್ನು ನೀಡಲಾಯಿತು.
ಹಿರಿಯ ಸಾಮಾಜಿಕ ಮುಂದಾಳು ಬಿ.ಕೆ.ರಮೇಶ್ ಕಲ್ಲೂರಾಯರವರು ನೂತನ ನಿವೇಶದಲ್ಲಿ ಅಭಿವೃದ್ಧಿಕಾರ್‍ಯಕ್ಕೆ ಗುದ್ದಲಿ ಪೂಜೆ ನೇರವೇರಿಸಿದರು. ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದುರವರು ತೆಂಗಿನಕಾಯಿವನ್ನು ಒಡೆಯುವ ಮೂಲಕ ಚಾಲನೆಗೈದರು.
ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್, ವಿಸ್ತಾರಣಾಧಿಕಾರಿ . ಶ್ರೀ ದೇವಿ ,ಬಂಬಿಲ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಯಪ್ರಕಾಶ್ ಎನ್.ಆರ್ ಅಧ್ಯಕ್ಷತೆ ವಹಿಸಿದ್ದರು. ಸವಣೂರು ಗ್ರಾ.ಪಂ, ಅಧ್ಯಕ್ಷೆ ಸುಂದರಿ ಬಂಬಿಲ, ಸದಸ್ಯ ಸತೀಶ್ ಅಂಗಡಿಮೂಲೆ,ಮಾಜಿ ಸದಸ್ಯ ಸುಧೀರ್ ಕುಮಾರ್ ರೈ ಕುಂಜಾಡಿ, ಬಂಬಿಲ ಹಾಲು ಉತ್ವಾದಕರ ಸಹಕಾರ ಸಂಘದ ಉಪಾಧ್ಯಕ್ಷ ಹೊನ್ನಪ್ಪ ಗೌಡ ಜಾರಿಗೆತ್ತಡಿ, ನಿರ್ದೇಶಕರಾದ ಅನ್ನಪೂರ್ಣ ಪ್ರಸಾದ್ ರೈ, ಕುಸುಮಾ ಎ., ಗಣೇಶ್ ನಾಯ್ಕ, ವಿಠಲ ಶೆಟ್ಟಿ, ಬಿ.ಜೆ. ಭಾಸ್ಕರ ರೈ ಕುಂಜಾಡಿ, ಸಂಘದ ಕಾರ್ಯದರ್ಶಿ ಕೋಮಲ, ಹಾಲು ಪರೀಕ್ಷಕಿ ವಿಮಲ ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಸಂಘದ ನಿರ್ದೇಶಕಿ ಇಂದಿರಾ ಬಿ.ಕೆರವರು ಮಾತನಾಡಿ ನಮ್ಮ ಸಂಘಕ್ಕೆ ಸ್ವಂತ ಜಾಗಬೇಕೆಂಬ ಬಹು ವರ್ಷಗಳ ಕನಸು ಇಂದು ನೇರವೇರಿದೆ.
ಪರಣೆ ದಿ.ಬಾಳಪ್ಪ ಗೌಡರವರ ಮಕ್ಕಳ ಅಧೀನದಲ್ಲಿ ಇದ್ದ ಜಾಗವನ್ನು ಸೊಸೈಟಿಯ ನೂತನ ಕಟ್ಟಡ ನಿರ್ಮಾಣಕ್ಕೆ ಅವರು ಸ್ಥಳದಾನವನ್ನು ಮಾಡಿರುತ್ತಾರೆ. ಈ ಪ್ರಕ್ರಿಯೆಯಲ್ಲಿ ಸಹಕಾರವನ್ನು ನೀಡಿದ ಸವಣೂರು ಗ್ರಾ.ಪಂ, ಮಾಜಿ ಸದಸ್ಯ ಕುಂಜಾಡಿ ಸುಧೀರ್ ಕುಮಾರ್ ರೈ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಹಾಗೂ ಸವಣೂರು ಗ್ರಾ.ಪಂ, ಸದಸ್ಯ ಸತೀಶ್ ಅಂಗಡಿಮೂಲೆರವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ನಿರ್ದೇಶಕ ಅನ್ನಪೂರ್ಣ ಪ್ರಸಾದ್ ರೈ ವಂದಿಸಿದರು. ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ. ಸತೀಶ್ ರಾವ್, ವಿಸ್ತಾರಣಾಧಿಕಾರಿ ಡಾ. ಶ್ರೀ ದೇವಿ