ಆಲಂಕಾರು 108 ಆಂಬ್ಯುಲೆನ್ಸ್ ನಲ್ಲಿ ಮಹಿಳೆಗೆ ಸುಸೂತ್ರ ಹೆರಿಗೆ

0

ಪುತ್ತೂರು : ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಆಲಂಕಾರಿನ 108 ಆಂಬ್ಯುಲೆನ್ಸ್ ನಲ್ಲಿ ಯೇ ಮಹಿಳೆಯೋರ್ವರು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜು.21 ರಂದು ನಸುಕಿನ ಜಾವ ನಡೆದಿದೆ.
ಕೊಯಿಲ ಗ್ರಾಮದ ಶಾಂತಿಮೂಲೆ ನಿವಾಸಿ ಭವ್ಯ (23ವ.) ಅವರು ಆಂಬ್ಯುಲೆನ್ಸ್ ನಲ್ಲಿ ಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಭವ್ಯ ಅವರಿಗೆ ಮುಂಜಾನೆ 3 ಗಂಟೆ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಅವರ ಸಹೋದರ ಸದಾನಂದ ಅವರು 108ಗೆ ಕರೆ ಮಾಡಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಆಲಂಕಾರು 108 ಆಂಬ್ಯುಲೆನ್ಸ್ ಸಿಬ್ಬಂದಿಗಳು ಶಾಂತಿಮೂಲೆಗೆ ತೆರಳಿ ಮಹಿಳೆಯನ್ನು ಆಸ್ಪತ್ರೆಗೆ ಕರೆ ತರುತ್ತಿದ್ದಂತೆ ಆಕೆ ದಾರಿ ಮಧ್ಯೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಲಂಕಾರು 108 ಆಂಬ್ಯುಲೆನ್ಸ್ ಸಿಬ್ಬಂದಿ ತೇಜಶ್ರೀ ಅವರು ಮಹಿಳೆಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ. ಬಳಿಕ ಮಹಿಳೆ ಹಾಗೂ ಮಗುವನ್ನು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು ಮಹಿಳೆ ಹಾಗೂ ಮಗು ಆರೋಗ್ಯವಾಗಿದ್ದಾರೆ. ಆಲಂಕಾರು 108 ಆಂಬ್ಯುಲೆನ್ಸ್ ಪೈಲೆಟ್ ಪುರುಷೋತ್ತಮ ಸಹಕರಿಸಿದರು.

LEAVE A REPLY

Please enter your comment!
Please enter your name here