ಅಮ್ಚಿನಡ್ಕ: ಗುಡ್ಡ ಕುಸಿತ-ಸಾವಿರಾರು ರೂ.ನಷ್ಟ

0

ಕೌಡಿಚ್ಚಾರು: ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮ್ಚಿನಡ್ಕ ನಿವಾಸಿ ಯುಸೂಫ್ ಹಾಜಿ ಎಂಬವರ ಮನೆ ಸಮೀಪದ ಗುಡ್ಡ ಜು.19ರಂದು ಭಾರೀ ಮಳೆಗೆ ಕುಸಿತಗೊಂಡಿದೆ.
ಗುಡ್ಡ ಕುಸಿತದ ಮಣ್ಣು ಯುಸೂಫ್ ಹಾಜಿಯವರ ಮನೆ ಸಮೀಪಕ್ಕೆ ಜರಿದುಗೊಂಡು ಬಂದಿದೆ. ಇದರಿಂದಾಗಿ ಯುಸೂಫ್ ಹಾಜಿಯವರಿಗೆ ಸುಮಾರು 50 ಸಾವಿರ ರೂ.ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ. ಸ್ಥಳಕ್ಕೆ ಅರಿಯಡ್ಕ ಗ್ರಾಮ ಆಡಳಿತಾಧಿಕಾರಿ, ಗ್ರಾಮ ಸಹಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here