ಉಪ್ಪಿನಂಗಡಿ: ಜೆಡಿಎಸ್ ಮುಖಂಡ ಮುನ್ನಿ ಅಶ್ರಫ್ ನಿಧನ

0

ಉಪ್ಪಿನಂಗಡಿ: ಇಲ್ಲಿನ ಮಠ ನಿವಾಸಿ, ಮೊಯ್ದೀನ್ ಕುಟ್ಟಿ ಶಾಫಿಯವರ ಪುತ್ರ, ಮುಹಮ್ಮದ್ ಅಶ್ರಫ್ ಬಿ.ಎಂ. ಯಾನೆ ಮುನ್ನಿ ಅಶ್ರಫ್ (54) ಕೆಲ ದಿನಗಳ ಅನಾರೋಗ್ಯದಿಂದ ಜು.21ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.


ಬಹಳ ಹಿಂದಿನಿಂದಲೂ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡು ತಾಲೂಕು, ಜಿಲ್ಲಾ ಘಟಕದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದ ಇವರು ಪ್ರಸಕ್ತ ಜಾತ್ಯಾತೀತ ಜನತಾ ದಳದ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಹಲವು ವರ್ಷಗಳ ಕಾಲ ಮಠ ಜುಮಾ ಮಸೀದಿಯ ಸಫಾ ಯಂಗ್‌ಮೆನ್ಸ್‌ನ ಅಧ್ಯಕ್ಷರಾಗಿ ಬಡ ಹೆಣ್ಣು ಮಕ್ಕಳ ಉಚಿತ ವಿವಾಹ ಮೊದಲಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಾನುರಾಗಿದ್ದರು. ಹೋರಾಟ ಗುಣದ ಅಶ್ರಫ್ ಸ್ಥಳೀಯವಾಗಿ ಸಾರ್ವಜನಿಕ ಸಮಸ್ಯೆಗಳು ಎದುರಾದಾಗ ಮುಂಚೂಣಿಯಲ್ಲಿ ನಿಂತು ಸಂಘಟಿತ ಹೋರಾಟ ಮಾಡುತ್ತಿದ್ದರು. ಉಪ್ಪಿನಂಗಡಿ ಪೇಟೆಯಲ್ಲಿ ‘ಮುನ್ನಿ ಚಪ್ಪಲ್ಸ್’ ಸಂಸ್ಥೆಯನ್ನು ಹೊಂದಿದ್ದ ಆಶ್ರಫ್ ಅವರು ಮುನ್ನಿ ಅಶ್ರಫ್ ಎಂದೇ ಗುರುತಿಸಿಕೊಂಡಿದ್ದರು.
ಮೃತ ಅಶ್ರಫ್ ಪತ್ನಿ, 3 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here