ಪುತ್ತೂರು: ಲೌಕಿಕ ಗುರು ಪ್ರಾಪಂಚಿಕ ವಿಷಯಗಳ ಬಗ್ಗೆ ಜ್ಞಾನವನ್ನು ನೀಡಿದರೆ ಆಧ್ಯಾತ್ಮಿಕ ಗುರು ಮುಕ್ತಿ ಮಾರ್ಗವನ್ನು ತೋರಿಸಬಲ್ಲ.ಭಗವಂತನು ಅವತಾರಿ ಪುರುಷನಾಗಿ ಬಂದಾಗ ಅವನನ್ನೇ ಗುರುವಾಗಿ ಸ್ವೀಕರಿಸಿದಾಗ ಮೋಕ್ಷದ ಹಾದಿ ಸುಲಭವಾಗುತ್ತದೆ ಎಂದು ಉಪ್ಪಳಿಗೆಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸವಿತಾ ಪ್ರಭು ಅವರು ಹೇಳಿದರು.
ಅವರು ಕೋರ್ಟ್ ರಸ್ತೆಯಲ್ಲಿರುವ ಸತ್ಯಸಾಯಿ ಮಂದಿರದಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಚಿಂತನೆ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಮಂದಿರದ ನವೀಕರಣಕ್ಕೆ ವಿಶೇಷ ಸಹಕಾರ ನೀಡಿದ ಆರ್ಕಿಟೆಕ್ಟ್ ಸಚ್ಚಿದಾನಂದ ಇವರನ್ನು ಜಿಲ್ಲಾಧ್ಯಕ್ಷ ಪ್ರಸನ್ನ ಭಟ್,ಟ್ರಸ್ಟ್ ಅಧ್ಯಕ್ಷ ಡಾ|ಸತ್ಯಸುಂದರ ರಾವ್,ಹಿರಿಯರಾದ ಪದ್ಮನಾಭ ನಾಯಕ್ ಇವರ ಸಮ್ಮುಖದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಬಳಿಕ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.