ಪರ್ಪುಂಜ ಸ್ನೇಹ ಯುವಕ, ಮಹಿಳಾ ಮಂಡಲದಿಂದ ಈಜು ಪಟು ಅನ್ವಿತ್ ರೈ ಬಾರಿಕೆಯವರಿಗೆ ಸನ್ಮಾನ

0

ಪುತ್ತೂರು: ಆಸ್ಟ್ರೇಲಿಯಾದ ಕ್ಲೀನ್ ಬ್ಯಾಂಡ್ ನಲ್ಲಿ ಆಗಸ್ಟ್ ನಲ್ಲಿ ನಡೆಯಲಿರುವ ಲೈಫ್ ಸ್ವಿಮ್ಮಿಂಗ್ ವರ್ಡ್ ಚಾಂಪಿಯನ್ ಶಿಪ್ ನಲ್ಲಿ  ಭಾಗವಹಿಸಲಿರುವ ಪುತ್ತೂರು ಅಥ್ಲೆಟಿಕ್ ಕ್ಲಬ್ ನ ಈಜು ಪಟು ಅನ್ವಿತ್ ರೈ ಬಾರಿಕೆ ಇವರಿಗೆ ಅವರ ಬಾರಿಕೆ ಮನೆಯಲ್ಲಿ ಸ್ನೇಹ ಯುವಕ ಮಂಡಲ ಹಾಗೂ ಮಹಿಳಾ ಮಂಡಲದಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅನ್ವಿತ್ ರೈಯವರ ತಂದೆ ಅನಿಲ್ ರೈ ಬಾರಿಕೆ, ತಾಯಿ ದಿವ್ಯ ಅನಿಲ್ ರೈ, ದೇವಕಿ ಎನ್ ರೈ ಬಾರಿಕೆ, ಅನ್ವಿತ್ ರೈ ಬಾರಿಕೆ, ಸ್ನೇಹ ಯುವಕ ಮಂಡಲದ ಗೌರವ ಅಧ್ಯಕ್ಷರಾದ ಪ್ರೇಮ್ ರಾಜ್ ರೈ ಹಾಗೂ ಗೌರವ ಸಲಹೆಗಾರರಾದ ನಾರಾಯಣ ರೈ ಬಾರಿಕೆ ಮತ್ತು ರಾಜೇಶ್ ರೈ ಪರ್ಪುಂಜ, ಅಧ್ಯಕ್ಷರಾದ ವಿಪಿನ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ನಿತಿನ್ ಗೌಡ ಹಾಗೂ ಮಾಜಿ ಅಧ್ಯಕ್ಷರಾದ ರಾಕೇಶ್ ರೈ ಪರ್ಪುಂಜ, ದಿನೇಶ್ ಗೌಡ, ರಾಜೇಶ್ ಸೇಡಿಗುಂಡಿ, ರಾಜೇಶ್ ಪಿದಪಟ್ಲ, ಜೀವನ್ ಅಮೀನ್, ಮಾಜಿ ಕಾರ್ಯದರ್ಶಿ ಸುರೇಶ್ ಪೂಜಾರಿ ಹಾಗೂ ಸದಸ್ಯರಾದ  ಜಗದೀಶ್ ಗೌಡ, ಕಿಶನ್ ಗೌಡ, ಪ್ರನೀತ್ ಕರ್ಕೇರ, ಅಶ್ವಿನ್ ಪಿದಪಟ್ಲ, ಕವನ್ ಪರ್ಪಂಜ, ಮಹಿಳಾ ಮಂಡಲದ ಮಾಜಿ ಕಾರ್ಯದರ್ಶಿ ಪ್ರಮೀಳಾ ಎಸ್, ಸದಸ್ಯರಾದ ಶ್ರೀಮತಿ ಹಾಗೂ ನೀತಿತ ರೈ, ಸಾವಿತ್ರಿ ರೈ  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here