ಪುತ್ತೂರು: ಬಿಎಂಎಸ್ ಕಾರ್ಮಿಕ ಸಂಘಟನೆಯ 70 ನೇ ವರ್ಷದ ಸ್ಥಾಪನಾ ದಿನಾಚರಣೆಯನ್ನು ಪುತ್ತೂರು ಬಿಎಂಎಸ್ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಕಚೇರಿಯಲ್ಲಿ ಜು.23 ರಂದು ಆಚರಿಸಲಾಯಿತು.
ಬಿ ಎಂ ಎಸ್ ಆಟೋರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಮರೀಲ್ ರವರು ಅಧ್ಯಕ್ಷತೆ ವಹಿಸಿ ಸಂಘಟನೆಯ ಮಹತ್ವವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಬಿಎಂಎಸ್ ಆಟೋರಿಕ್ಷಾ ಚಾಲಕ ಮಾಲಕರ ಸೌಹಾರ್ದ ಸಹಕಾರಿಯ ಅಧ್ಯಕ್ಷ ಸುರೇಶ್ ಸುಧಾಕರ್ ನಾಯಕ್, ಮಾಜಿ ಅಧ್ಯಕ್ಷರುಗಳಾದ ನಾರಾಯಣಗೌಡ, ಹುಸೇನ್ ಜಿ, ಸತೀಶ್ ಪ್ರಭು ಮಣಿಯ, ಬಾಲಕೃಷ್ಣ ಗೌಡ, ಭಾಸ್ಕರ್ ನಾಯ್ಕ್, ಸಂಘದ ಸದಸ್ಯರುಗಳಾದ ಬಿ ಎಂ ಎಸ್ ಆಟೋ ರಿಕ್ಷಾ ದಿನೇಶ್ ಭವನ ಪಾರ್ಕಿನ ಅಧ್ಯಕ್ಷ ದಯಾನಂದ ಪ್ರಭು, ಕಾರ್ಯದರ್ಶಿ ರಮೇಶ್ ಗೌಡ, ಶಿವಪ್ರಸಾದ್ ಆಚಾರ್ಯ, ಜನಾರ್ದನ ಬಿ, ಅಶೋಕ್ ಪಡಿಲು, ಅಂಗಾರ, ರವಿಚಂದ್ರ ನೆಹರು ನಗರ, ವಿಕ್ರಮ್ ಪರ್ಲಡ್ಕ, ವಿಜಯ ಚಂದ್ರ, ಮೋಹನ್ ಕೆ, ಜಿನ್ನಪ್ಪ ನಾಯ್ಕ್, ಶಂಕರ ಮಾರ್ಕೆಟ್ ಪಾರ್ಕ್, ಮಹೇಶ್ ಮಣಿಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.ಸಂಘದ ಕಾರ್ಯದರ್ಶಿ ಹೇಮಂತ್ ನೆಹರು ನಗರ ಅವರು ಕಾರ್ಮಿಕ ಗೀತೆ ಹಾಡಿ, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.