






ಪುತ್ತೂರು: ರಿಪೇರಿಗೆ ತಂದಿರಿಸಿದ್ದ 16 ಬೋರ್ವೆಲ್ ಪಂಪ್ಗಳು ಕಳವುಗೊಂಡಿರುವ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದಲ್ಲಿ ನಡೆದಿದೆ.
ಪುಣಚ ನಿವಾಸಿ ಗಣೇಶ ಗೌಡ ಎಂಬವರು ತನ್ನ ಮನೆಯ ಬಳಿಯಿರುವ ಕಟ್ಟಡದಲ್ಲಿ ರಿಪೇರಿಗಾಗಿ ಸಾರ್ವಜನಿಕರಿಂದ ಪಡೆದು ಇರಿಸಿದ್ದ 16 ಬೋರ್ವೆಲ್ ಪಂಪ್ಗಳನ್ನು ಜು.21ರ ರಾತ್ರಿಯಿಂದ ಜು.22ರ ಬೆಳಗ್ಗಿನ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿರುವುದಾಗಿ ವರದಿಯಾಗಿದೆ.


ಕಳವಾದ ಬೋರ್ವೆಲ್ ಪಂಪ್ಗಳ ಒಟ್ಟು ಮೌಲ್ಯ 1.81 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಗಣೇಶ ಗೌಡ ಅವರು ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 119/2024, ಕಲಂ: 303 (2)BNS ರಂತೆ ಪ್ರಕರಣ ದಾಖಲಾಗಿದೆ.















