






ನೆಲ್ಯಾಡಿ: ಇಲ್ಲಿಗೆ ಸಮೀಪದ ಕಟ್ಟೆಮಜಲು ನಾರಾಯಣ ಶೆಟ್ಟಿ ಅವರ ಮನೆಯ ಸಮೀಪ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿ ಜನರಲ್ಲಿ ಭಯ ಭೀತಿ ಉಂಟಾದ ಘಟನೆ ಜು.24ರಂದು ಸಂಜೆ ನಡೆದಿದೆ.


ಸುಮಾರು 12 ಅಡಿಗಿಂತಲೂ ಉದ್ದದ ಕಾಳಿಂಗ ಸರ್ಪ ಇದಾಗಿತ್ತು. ಗೋಳಿತ್ತೊಟ್ಟು ನಿವಾಸಿ, ಉರಗತಜ್ಞ ಎಚ್.ಆರ್ ಹೈದರ್ ಅವರು ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ದಿನೇಶ್, ಕೌಕ್ರಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷ ಲೋಕೇಶ್ ಬಾಣಜಾಲು, ಕೃಷ್ಣಪ್ಪ ಕಟ್ಟೆಮಜಲು ಸಹಕರಿಸಿದರು.















