ಪಾಂಬಾರು ಆರ್ ಪಿ ಕಲಾ ಸೇವಾ ಟ್ರಸ್ಟ್ ಬಾಲ ಪ್ರತಿಭೆಗಳ ಗಾಯನ ಸ್ಪರ್ಧೆ ಸೀಸನ್ -1 ಗ್ರ್ಯಾಂಡ್ ಫಿನಾಲೆ ಪ್ರಶಸ್ತಿ ಪ್ರದಾನ

0

ಪುತ್ತೂರು:ಆರ್ ಪಿ ಕಲಾ ಸೇವಾ ಟ್ರಸ್ಟ್ ಬಾಲ ಪ್ರತಿಭೆಗಳ ಗಾಯನ ಸ್ಪರ್ಧೆ ಸೀಸನ್ -1 ಗ್ರ್ಯಾಂಡ್ ಫಿನಾಲೆ ಪ್ರಶಸ್ತಿ ಪ್ರದಾನ 2024 ಕಾರ್ಯಕ್ರಮ ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ಜು.21ರಂದು ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಳ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಕ್ಕಮ್ಮ ಈ ಅದ್ಭುತ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ವ್ಯಕ್ತ ಪಡಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಇಂತಹ ಕಾರ್ಯಕ್ರಮ ಪೆರ್ಲಂಪಾಡಿಯಲ್ಲಿ ಎಲ್ಲೂ ಕಂಡಿಲ್ಲ ಬೇರೆ ಬೇರೆ ಜಿಲ್ಲೆಗಳ ಪ್ರತಿಭೆಗಳು ನಮ್ಮ ಈ ಊರಿಗೆ ಕರೆತಂದದ್ದು ನಿಜವಾದ ಸಾಧನೆ ಇದು ನಮ್ಮ ಪುತ್ತೂರು ತಾಲೂಕಿಗೆ ಹೆಮ್ಮೆಯ ವಿಚಾರ ನನ್ನಿಂದ ನಿಮ್ಮ ಸಂಸ್ಥೆಗೆ ಯಾವ ರೀತಿಯ ಸಹಕಾರ ನೀಡಲು ಬದ್ದನಿದ್ದೇನೆ ಎಂದರು.

ಪುತ್ತೂರು ಉದ್ಯಮಿ & ಖ್ಯಾತ ಗಾಯಕ ಅಶೋಕ್ ಆಚಾರ್ಯ,ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಶುಭಹಾರೈಸಿದರು.ಪಂಜ ತೊಂಡಚ್ಚನ್ ಇಂಡಸ್ಟ್ರಿಯ ಮನು ಯಂ , ತಮಿಳು ಕಲಾವಿದರ ವೇದಿಕೆ ಸುಳ್ಯದ ಕನ್ನದಾಸನ್ ಯಂ , ಚಂದ್ರ ಐ. ಇದ್ಪಾಡಿ ಸ್ಥಾಪಕ ಅಧ್ಯಕ್ಷರು ನಲಿಕೆ ಸಮಾಜ ಸೇವಾ ಸಂಘ ಪುತ್ತೂರು.ದ.ಕ, ತಿಮ್ಮಪ್ಪ ಮುಖ್ಯ ಗುರುಗಳು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾಲೆತ್ತೋಡಿ ಉಪಸ್ಥಿತರಿದ್ದರು.


ಹಾಗೂ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ 14 ಮಂದಿ ಸ್ಪರ್ಧಾಳುಗಳಿಂದ ಗಾಯನ ಸ್ಪರ್ಧೆ ನಡೆಯಿತು. ಹೇಮಾಶ್ರೀ ಮಂಡ್ಯ ಪ್ರಥಮ, ಯಶಸ್ ರಾವ್ ದ್ವಿತೀಯ, ವೃಷ್ಟಿ ವಿ. ಕೆ. ತೃತೀಯ ಸ್ಥಾನ ಪಡೆದು. ನಿಹಾಲ್, ಮನಸ್ವಿ, ಡಿ. ಸುಳ್ಯ. ಕೆ. ಎಂ. ವರ್ಷ, ಆತ್ಮೀ ಕಡಬ, ಪ್ರಾರ್ಥನಾ ಭಟ್, ಮೇಘನಾ. ವಿ. ರಾವ್, ರಕ್ಷಾ ಸವಣೂರು, ನಿನಾದ. ಕೆ, ಪ್ರಾಪ್ತಿ. ಆರ್. ಶೆಟ್ಟಿ, ತನ್ಮಯ್ ಸುಳ್ಯ, ಇವರು ಸಮಾಧಾನಕರ ಬಹುಮಾನ ಪಡೆದರು. ಆರ್. ಪಿ. ಕಲಾ ಸೇವಾ ಟ್ರಸ್ಟ್ ಪಾಂಬಾರು ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.


ಸಮಾರೋಪ ಸಮಾರಂಭದಲ್ಲಿ ಸಮಾಜಮುಖಿ ಸೇವೆಯನ್ನು ನೀಡಿದ ಕಾರುಣ್ಯ ನಿಧಿ ಹೆಲ್ಪ್ ಲೈನ್ಸ್ ಇವರನ್ನು ಗುರುತಿಸಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪವಿತ್ರ ರೂಪೇಶ್ ಪುತ್ತೂರು, ರಾಶಿ ಯು. ಶೆಟ್ಟಿ, ಲಕ್ಷಿತಾ ಪೂಜಾರಿ, ವಿಜಯ ಕುಮಾರ್ ಸುಳ್ಯ, ಪ್ರಶಾಂತ್ ಪುತ್ತೂರು, ಹರೀಶ್ ಮಂಜೊಟ್ಟಿ, ಮುರಳಿ ನಿರ್ಚಾಲು, ಅಶ್ವಿನಿ ಶ್ರೇಯ ವಿಟ್ಲ, ಶ್ವೇತ ಪ್ರವೀಣ್ ಆಚಾರ್ಯ ಮೂಡುಬಿದ್ರೆ, ಪೂವಪ್ಪ ಪೂಜಾರಿ, ಸೌಮಿನಿ ಆರ್ ಕೆ, ಚಂದ್ರಕಲಾಮಂದಾರ್ತಿ, ಕೃತಿ ಕಡಬ, ಸುರೇಶ್ ರಾವ್ ಪುತ್ತೂರು, ಯಶ್ವಿಕ ಕುಂಟಿನಿ, ಪ್ರಭಾಕರ್ ಎನ್, ಪ್ರೇಮ ಪ್ರಭಾಕರ್, ಸುರೇಶ್ ಕುಮಾರ್ ಚಾರ್ವಕ, ಚೈತ್ರ ಕಡಬ, ವ್ಯಾಸ ರಾಜ್, ಶಾಂತ ಕುಂಟಿನಿ, ಶಿವರಾಜ್ ಹಾಸನ, ಮನು ತೊಂದಚ್ಚನ್, ರವಿ ಎಂಡೆಸಾಗು, ಚಂದ್ರ ಕೇದಂಬಾಡಿ, ಮಮತಾ ಕೊಡಿಯಾಲ, ಗೌರಿತ ಕೆ. ಜಿ, ಬಾಲಕೃಷ್ಣ ಚೊಕ್ಕಾಡಿ, ಜಯಂತ್ ಗೌಡ ಪೆರ್ಲಂಪಾಡಿ, ಚೇತನ್ ಪೂಜಾರಿ ಒಟ್ಟು 32 ಮಂದಿಯನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ , ಹೇಮಾನಾಥ್ ಶೆಟ್ಟಿ,ಪ್ರಗತಿಪರ ಚಿಂತಕ ರಾಮಚಂದ್ರ ಭಟ್, ಪ್ರಮೋದ್ ಕೆ.ಯಸ್,ಕೊಳ್ತಿಗೆ ಗ್ರಾ.ಪಂ ಉಪಾಧ್ಯಕ್ಷ ಗ್ರಾ. ಪಂ. ,ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಸಂತ ಕುಮಾರ್ ರೈ ದುಗ್ಗಲ ,ಸೌಹಾರ್ದ ವೇದಿಕೆ ಪ್ರದೀಪ್ ಕುಮಾರ್ ರೈ , ಮಾಜಿ ತಾಲೂಕು ಪಂಚಾಯತ್ ಸದಸ್ಯ ರಾಮ ಪಾಂಬಾರು, ಗಾಯಕ ಮಿಥುನ್ ರಾಜ್ ವಿದ್ಯಾಪುರ , ಚಾರ್ವಕ ಖ್ಯಾತ ಗಾಯಕ ಪದ್ಮಾರಾಜ್ ಬಿ. ಸಿ.ಉಪಸ್ಥಿತರಿದ್ದರು.


ಸಂಸ್ಥೆಯ ಸಂಚಾಲಕ ರವಿ ಪಾಂಬಾರು,ಅಧ್ಯಕ್ಷ, ಶ್ರೀಧರ್ ಎಕ್ಕಡ್ಕ.ಉಪಾಧ್ಯಕ್ಷ, ರೋಹಿತ್ ಕುರಿಕ್ಕಾರ್.ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಅಡ್ಯನಡ್ಕ,ಜತೆ ಕಾರ್ಯದರ್ಶಿ, ವಸಂತಿ ಎಣ್ಮುರು, ಕೋಶಾಧಿಕಾರಿ ಸನತ್ ಕೆ.ಖಜಾಂಜಿ, ಕುಶಾಲಪ್ಪ ಎಣ್ಮುರು,ಸಂಘಟನಾ ಕಾರ್ಯದರ್ಶಿ ಸಂದ್ಯಾ ಮಂಡೆಕೋಲು, ರಾಮ ಪಾಂಬಾರು ,ಸದ್ಯಸರು ಪ್ರಜ್ವಲ್.ಪ್ರಮೀಳಾ ರಾಜ್ ಸುಳ್ಯ,ಅನುರಾಧ ನೆಟ್ಟರು, ರಶ್ಮಿ ಕಿರೀಭಾಗ,ಸೌಮ್ಯ ಸುಳ್ಯ,ಪವಿತ್ರ,ಮಣಿಪಾಲ ಕುಶಾಲಪ್ಪ ಎಣ್ಮುರು,ಗಣೇಶ್ ಗಣಿ,ನಿಕ್ಷಿತಾ ಎ,ನವ್ಯ ಕೆ ನವ್ಯ ದಾಮೋದರ್ ಪುತ್ತೂರು,ಶ್ರೇಯ ಯಸ್ ಕಡಬ,ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here