





ಪುತ್ತೂರು: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿಧಾನಸಭಾ ಕಾರ್ಯಕಲಾಪದಲ್ಲಿ ಭಾಗವಹಿಸಿ ಮಾನ್ಯ ವಿಧಾನಸಭಾ ಸ್ಪೀಕರ್ ಆದ ಯು. ಟಿ ಖಾದರ್ ಅವರನ್ನು ಭೇಟಿಯಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು.


ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ಮಾದ್ಯಮದ ಮುಖಾಂತರ ಸರಕಾರಕ್ಕೆ ನೇರವಾಗಿ 10 ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಸಿಮಕ್ ಮನವಿ ಸಲ್ಲಿಸಿದರು. ಮೊಹಮ್ಮದ್ ಸಿಮಕ್, ಮೊಹಮ್ಮದ್ ಸಿಫಾಝ್, ಮೊಹಮ್ಮದ್ ಇಝಾನ್ ಇಬ್ರಾಹಿಂ,ಹೇಮಂತ್, ಮೊಹಮ್ಮದ್ ಬಾಸಿತ್, ಪ್ರಣೀತ್ ಜೆ ಶೆಟ್ಟಿ, ಅಯಾನ್ ಶೇಖ್, ಮೊಹಮ್ಮದ್ ಆಸೀಮ್, ಮೊಹಮ್ಮದ್ ಫಾಹಿಮ್, ಬೆಂಗಳೂರಿನ ವಿಧಾನ ಸಭೆಗೆ ಭೇಟಿ ನೀಡಿದರು. ಶಾಲಾ ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್ ಮತ್ತು ಶಿಕ್ಷಕಿ ಸಾದಿಯ ಸಹಕರಿಸಿದರು.













