ಪುತ್ತೂರು: ಶ್ರೀರಾಮ ಮಂದಿರ ಕೆದಂಬಾಡಿ ಮತ್ತು ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಇದರ ಆಶ್ರಯದಲ್ಲಿ ನಡೆಯಲಿರುವ 3ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆಯ ಸಲವಾಗಿ ಪೂಜಾ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು.
ಅಧ್ಯಕ್ಷರಾಗಿ ರೇಖಾ ರಾಘವ ಗೌಡ ಕೆರೆಮೂಲೆ, ಕಾರ್ಯದರ್ಶಿಯಾಗಿ ಪುಷ್ಪಾ ದಿನೇಶ್ ಬೋಳೋಡಿ, ಕೋಶಾಧಿಕಾರಿಯಾಗಿ ರೂಪಾ ಸಿ.ರೈ ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ಸೀಮಾ ಪ್ರಭಾಕರ ರೈ ಮುಂಡಾಲಗುತ್ತು, ಪೂರ್ಣಿಮಾ ಎಸ್. ಭಟ್ ಸನ್ಯಾಸಿಗುಡ್ಡೆ, ಸುಜಾತ ಆರ್. ರೈ ಪಂಜಿಗುಡ್ಡೆ, ಭವ್ಯ ಡಿ.ಐ.ಬಿ ಇದ್ಯಪೆ, ಅಶ್ವಿನಿ ಎಸ್. ರೈ ಕುರಿಕ್ಕಾರ, ಪುಷ್ಪಾವತಿ ವಿ ನೈಕ್ ಕೋಡಿಯಡ್ಕ, ಪಾವನ ವಿ ರೈ ಮುಂಡಾಳಗುತ್ತು, ಇಂದಿರಾ ಎನ್. ಗೌಡ ಪಟ್ಲಮೂಲೆ, ಸೌಮ್ಯ ಎಸ್. ರೈ ಮಾಣಿಪ್ಪಾಡಿ, ಶಕುಂತಳಾ ಎಸ್. ಚೌಟ ಪಟ್ಟೆತ್ತಡ್ಕ, ಸಂದ್ಯಾ ಡಿ. ರೈ ಮಾಣಿಪ್ಪಾಡಿ, ಅಮಿತಾ ವಿ ರೈ ಕೋರಂಗ, ವಿಜಯಲಕ್ಷ್ಮಿ ಕೆ. ರೈ ಕೋರಂಗ, ವಾಣಿ ಕೃಷ್ಣಕುಮಾರ್ ಗೌಡ ಇದ್ಯಪೆ, ಸುಮನ ಮುಂಡಾಳ, ಅಮಿತಾ ಬಾಬು ಕೋರಂಗ, ನಮಿತಾ ರೈ ಕೋರಿಕ್ಕಾರು, ರಶ್ಮಿ ದಿಲೀಪ್ ರೈ ಕೊಲ್ಲಾಜೆ ಆಯ್ಕೆಯಾದರು. ಈ ವೇಳೆ ಶ್ರೀರಾಮ ಮಂದಿರದ ಪದಾಧಿಕಾರಿಗಳು, ಭಜನಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.