ಬನ್ನೂರು ಕರ್ಮಲದಲ್ಲಿ ಪತ್ತೆಯಾದ ನಿರಾಶ್ರಿತ ಗೋವುಗಳು – ದೇವಸ್ಥಾನದ ಎದುರು ವಾರಿಸುದಾರರಿಗೆ ಹಸ್ತಾಂತರ

0

ಸುದ್ದಿ ವೆಬ್ ನ್ಯೂಸ್ ನೋಡಿ ದೇವಳಕ್ಕೆ ಬಂದ ವಾರಿಸುದಾರರು

ವಾರಿಸುದಾರರ ಮನೆಯಿಂದ ಕಳವಾಗಿತ್ತು ಗೋವುಗಳು – ಪೊಲೀಸರನ್ನು ಕಂಡು ಬಿಟ್ಟು ಹೋಗಿರಬಹುದೆಂಬ ಶಂಕೆ !

ಪುತ್ತೂರು: ಬನ್ನೂರು ಕರ್ಮಲ ಬಲಮುರಿ ಗಣಪತಿ ದೇವಸ್ಥಾನದ ಬಳಿಯ ಪರಿಸರದಲ್ಲಿ ಪತ್ತೆಯಾದ ನಿರಾಶ್ರಿತ ಗೋವುಗಳೆರಡು ಇಬ್ವರು ಪ್ರತ್ಯೇಕ ವಾರಿಸುದಾರರಿಗೆ ಹಸ್ತಾಂತರಿಸಲಾಗಿದೆ.
ಶೇವಿರೆ ನಿವಾಸಿ ನಗರಸಭಾ ಸದಸ್ಯ ದಿನೇಶ್ ಗೌಡ ಅವರ ತಾಯಿ ವಾರಿಜ ಮತ್ತು ನೆಹರುನಗರ ಪುತ್ತೂರು ಟಿಂಬರ್ ಬಳಿಯ ಅಬ್ದುಲ್ ಸಮಾದ್ ಅವರು ಗೋವುಗಳ ವಾರಿಸುದಾರರಾಗಿದ್ದು, ಅವರು ದೇವಳಕ್ಕೆ ಬಂದು ಗೋವುಗಳ ಗುರುತು ಪರಿಚಯ ನೀಡಿ ಗೋವುಗಳನ್ನು ಪಡೆದುಕೊಂಡಿದ್ದಾರೆ. ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿಯವರು ಗೋವುಗಳ ವಾರಿಸುದಾರ ಹಿನ್ನಲೆ ಪಡೆದು ಪರಿಶೀಲಿಸಿ ಹಸ್ತಾಂತರಿಸಿದರು. ಈ ಸಂದರ್ಭ ನಗರಸಭಾ ಸದಸ್ಯ ಪಿ ಜಿ ಜಗನ್ನಿವಾಸ ರಾವ್ ಮತ್ತು ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಾರಿಸುದಾರರ ಮನೆಯಿಂದ ಕಳವಾಗಿತ್ತು ಗೋವುಗಳು:
ಎರಡು ಗೋವುಗಳು ವಾರಿಸುದಾರರ ಮನೆಯ ಬಳಿಯಿಂದ ಕಳವಾಗಿತ್ತು. ಈ‌ ಕುರಿತು ಅವರು ಹುಡುಕಾಡುತ್ತಿದ್ದ ಸಂದರ್ಭ ಸುದ್ದಿ ವೆಬ್ ನ್ಯೂಸ್ ನಲ್ಲಿ ನಿರಾಶ್ರಿತ ಗೋವುಗಳ ರಕ್ಷಣೆ ಕುರಿತು ವರದಿ ನೋಡಿ ಗೋವನ್ನು ನೋಡಲು ದೇವಳಕ್ಕೆ ಬಂದ ವಾರಿಸುದಾರರು ತಮ್ಮ ಗೋವನ್ನು ಖಚಿತಪಡಿಸಿಕೊಂಡರು. ಬಳಿಕ ದೇವಳದ ಆಡಳಿತಾಧಿಕಾರಿಗೆ ಮನವಿ ಮಾಡಿದ ಹಿನ್ನಲೆಯಲ್ಲಿ‌ ವಾರಿಸುದಾರರ ಕುರಿತು ದೇವಳದ ವತಿಯಿಂದ ಮಾಹಿತಿ‌ ಕಲೆ ಹಾಕಿದ ಬಳಿಕ ದೇವಳದ ಎದುರು ವಾರಿಸುದಾರರಿಂದ ಹುಂಡಿಗೆ ಕಾಣಿಕೆ ಸಲ್ಲಿಸಿ ಗೋವುಗಳನ್ನು ಹಸ್ತಾಂತರಿಸಿದರು. ಈ ಸಂದರ್ಭ ವಾರಿಸುದಾರರು ಹೇಳಿದಂತೆ ನಮ್ಮ ಮನೆ ಬಳಿಯಿಂದ ಗೋವುಗಳು ಕಳವಾಗಿತ್ತು. ಕಳವಾದ ಗೋವನ್ನು ಪೊಲೀಸರ ಭಯದಿಂದ ರಸ್ತೆ ಬದಿಯಲ್ಲೇ ಬಿಟ್ಟು ಹೋಗಿರಬಹುದು.‌ ಆದರೆ ಇದೀಗ ಗೋವು ಪತ್ತೆಯಾಗಿರುವುದು ಸಂತೋಷ ಆಗಿದೆ ಎಂದು ವಾರಿಜ ಮತ್ತು ಅಬ್ದುಲ್ ಸಮಾದ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here