ತೆರೆಮರೆಯ ಸಾಧಕರನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಪ್ರಧಾನಿಯವರ ಮನ್ ಕಿ ಬಾತ್‌ನಿಂದ ಆಗುತ್ತಿದೆ -ಭಾಗೀರಥಿ ಮುರುಳ್ಯ – ಪಾಲ್ತಾಡಿ ಬೂತ್ 70ರಲ್ಲಿ ಮನ್ ಕಿ ಬಾತ್ ವೀಕ್ಷಣೆ

0

ಸವಣೂರು: ತೆರೆಮರೆಯ ಸಾಧಕರನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಪ್ರಧಾನಿಯವರ ಮನ್ ಕಿ ಬಾತ್‌ನಿಂದ ಆಗುತ್ತಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಅವರು ಪಾಲ್ತಾಡಿ ಗ್ರಾಮದ ಬಂಬಿಲ ಯಮುನಾ ಅವರ ಮನೆಯಲ್ಲಿ ನಡೆದ ಸುಳ್ಯ ಮಂಡಲ, ಸವಣೂರು ಮಹಾಶಕ್ತಿ ಕೇಂದ್ರದ ಬೂತ್ ಸಂಖ್ಯೆ 70 (ಪಾಲ್ತಾಡಿ 1) ರಲ್ಲಿ ಜುಲೈ 28ರಂದು ನಡೆದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ವೀಕ್ಷಣೆಯ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಪ್ರವಾಸಿ ಕಾರ್ಯಕರ್ತರಾದ ಗಿರಿಶಂಕರ ಸುಲಾಯ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಪ್ರತೀ ತಿಂಗಳು ಮನ್ ಕಿ ಬಾತ್ ನಲ್ಲಿ ವಿವಿಧ ಸಾಧಕರನ್ನು ಹಾಗೂ ಸಂಸ್ಥೆಗಳ ಬಗ್ಗೆ ತಿಳಿದುಕೊಂಡು ಅವರಿಂದ ಪ್ರೇರಪಣೆಗೊಂಡು ಮುಂದುವರಿಯಲು ಮೊದಲ ಹೆಜ್ಜೆಯಾಗಿದೆ.ಯಶಸ್ವಿ ಉದ್ಯಮಿ ಹಾಗೂ ಉದ್ದಿಮೆಗಳ ಬಗ್ಗೆ ಸಮಾಜಕ್ಕೆ ತಿಳಿಯುವ ಕೆಲಸವೂ ಮನ್ ಕಿ ಬಾತ್ ನಿಂದ ಆಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಇಂದಿರಾ ಬಿ.ಕೆ.,ಸುಳ್ಯ ಮಂಡಲ ಎಸ್.ಟಿ.ಮೋರ್ಚಾದ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.,ಸುಳ್ಯ ಮಂಡಲ ಎಸ್.ಸಿ.ಮೋರ್ಚಾದ ಕೋಶಾಧಿಕಾರಿ ಸತ್ಯಕುಮಾರ್ ಬಿ.ಎನ್., ಬೂತ್70ರ ಅಧ್ಯಕ್ಷ ಸತೀಶ್ ಅಂಗಡಿಮೂಲೆ, ಕಾರ್ಯದರ್ಶಿ ಪ್ರವೀಣ್ ಕುಮಾರ್,ಸವಣೂರು ಬೂತ್ 65ರ ಕಾರ್ಯದರ್ಶಿ ಸತೀಶ್ ಬಲ್ಯಾಯ, ಸುರೇಶ್ ರೈ ಸೂಡಿಮುಳ್ಳು, ಮನೆಯವರಾದ ಯಮುನಾ, ಸುಶೀಲಾ, ಗೀತಾ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here