ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಕೋಸ್ಟಲ್ ಗೇಟ್ ಹೋಲ್ಡಿಂಗ್ ಕಂಪನಿಯ ಹೊಸ ಉದ್ಯಮ ಆರಂಭಗೊಳ್ಳಲಿದ್ದು ಇದರ ವೆಬ್‌ಸೈಟ್ ಹಾಗೂ ಲೋಗೋ ಮತ್ತು ಧ್ವಜ ಅನಾವರಣವು ಜು.27ರಂದು ಅಡ್ಡಹೊಳೆಯಲ್ಲಿ ನಡೆಯಿತು.
ಸಂಸ್ಥೆಯ ಲೋಗೋವನ್ನು ಮಂಗಳೂರು ಉಪವಿಭಾಗದ ಅಬಕಾರಿ ಡಿವೈಎಸ್‌ಪಿ ಸೌಮ್ಯಲತಾ ಬಿಡುಗಡೆಗೊಳಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಉದ್ಯಮವೊಂದು ಪ್ರಾರಂಭವಾಗುತ್ತಿರುವುದು ಶ್ಲಾಘನಿಯ, ಈ ಉದ್ಯಮದಿಂದ ಸ್ಥಳೀಯರಿಗೆ ಉದ್ಯೋಗ ಅವಕಾಶ ಹಾಗೂ ಯಾತ್ರಿಕರಿಗೂ ಅನುಕೂಲವಾಗಲಿದೆ. ಈ ಸಂಸ್ಥೆಯು ಶೀಘ್ರವಾಗಿ ಲೋಕಾರ್ಪಣೆಯಾಗಲಿ ಎಂದು ಹೇಳಿ ಶುಭ ಹಾರೈಸಿದರು. ಸಂಸ್ಥೆಯ ಅಧಿಕೃತ ವೆಬ್ಸೈಟ್‌ನ್ನು ಯುವ ಸಲಹಾ ಮಂಡಳಿಯ ಪ್ರಾದೇಶಿಕ ನಿರ್ದೇಶಕ ತನುಷ್ ಎನ್ ಶೆಟ್ಟಿ, ಮತ್ತು ಶಿರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕಾರ್ತಿಕೇಯನ್ ಇವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಸಂಸ್ಥೆಯ ಧ್ವಜವನ್ನು ನಂಶಿದ್ ಖಂಡತ್ತಿಲ್ ಹಾಗೂ ಪರಿಪಾಲನಾ ಕೇಂದ್ರ ಬೆಳ್ತಂಗಡಿ ಧರ್ಮಪ್ರಾಂತ್ಯ ಇದರ ನಿರ್ದೇಶಕ ರೆ.ಫಾ. ಜೋಸೆಫ್ ಮಟ್ಟಮ್ ಅನಾವರಣಗೊಳಿಸಿ ಮಾತನಾಡಿದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬೆಳವಾಡಿ ಆಗಮಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತೋಷ್ ಕೆ.ಜೋಸೆಫ್ ವಹಿಸಿದ್ದರು. ಅತಿಥಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಸಂಸ್ಥೆಯ ಸಿ.ಇ.ಒ ಮತ್ತು ಪಾಲುದಾರ ಸ್ಮಿತಿಲ್. ಕೆ.ಎಂ ಮಾತನಾಡಿ ಸಂಸ್ಥೆ ಶಿರಾಡಿ ಅಡ್ಡೋಲೆ ಪರಿಸರದಲ್ಲಿ ಕೋಸ್ಟಲ್ ಗೇಟ್ ಹೋಲ್ಡಿಂಗ್ ಕಂಪನಿ ಲಾಂಛನದಡಿ ಸುಸಜ್ಜಿತ ಕೆಫೆ, ವಸತಿ ಗ್ರಹ,ರೆಸ್ಟೋರೆಂಟ್, ಶಾಪಿಂಗ್ ಮಳಿಗೆ,ಉದ್ಯಾನವನ, ವಿಶಾಲ ಪಾಕಿಂಗ್ ಸೌಲಭ್ಯ, ಬೈಕರ್ಸ್ ಪಾಯಿಂಟ್, ಧ್ಯಾನ ಕೊಠಡಿ, ತೆರೆದ ವೇದಿಕೆ ಗಳೊಂದಿಗೆ ಆರಂಭಗೊಳ್ಳಲಿದೆ ಮುಂದಿನ ದಿನಗಳಲ್ಲಿ ಯುವಜನತೆಗೆ ಉದ್ಯೋಗ ಅವಕಾಶ, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ಗುರಿ ನಮ್ಮದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪಾಲುದಾರ ಸಂತೋಷ್ ಕೆ.ಜೋಸೆಫ್ ಅವರು ಮಾತನಾಡಿ, ಕೋಸ್ಟ್ ಹಿಲ್ಸ್ ಕೆಫೆ, ಲಾಡ್ಜ್ ಮತ್ತು ವೆಜ್ ರೆಸ್ಟೋರೆಂಟ್ ನಲ್ಲಿ ವಿಶಾಲವಾದ ಪಾಕಿಂಗ್, ಧ್ಯಾನ ಕೊಠಡಿ, ತೆರೆದ ವೇದಿಕೆ, ಶಾಪಿಂಗ್ ಮಳಿಗೆಗಳು, ಮಕ್ಕಳ ಆಟದ ಪ್ರದೇಶ, ಪ್ರೀಮಿಯಂ ವಾಶ್ ರೂಂಗಳು, ಉದ್ಯಾನ ಮತ್ತು ಪರ್ವತ ನೋಟ, ಟ್ರೆಕ್ಕಿಂಗ್ ವಾಸ್ತವ್ಯ, ಇವಿ ಚಾಜಿಂಗ್ ಪಾಯಿಂಟ್, ಬೈಕರ್ಸ್ ಪಾಯಿಂಟ್ ಇರಲಿದ್ದು ವಿಶೇಷವಾಗಿ ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳ ಸೃಷ್ಟಿ, ಯುವಕರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ, ಪರಿಸರ ಸ್ನೇಹಿ ಉತ್ಪನ್ನಗಳು ಮತ್ತು ಸೇವೆಗಳ ಪ್ರಚಾರ ಮತ್ತು ಅಭಿವೃದ್ಧಿ, ಮಹಿಳಾ ಸಬಲೀಕರಣಕ್ಕೆ ಆದ್ಯತೆ, ಸಿಎಸ್‌ಆರ್ ಚಟುವಟಿಕೆಗಳು (ದತ್ತಿ), ಸ್ಥಳೀಯ ಆರ್ಥಿಕತೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.
ಸ್ಮಿತಿಲ್ ಮತ್ತು ಸೀನು ಅಬ್ರಹಾಂ ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ
ಕಾರ್ಯಕ್ರಮದಲ್ಲಿ ಶ್ರೀಮತಿ ತ್ರೆಸ್ಸಿಯಮ್ಮಜೋಸೆಫ್, ತ್ರೆಸ್ಸಿ ಪಾಪಚ್ಚನ್ ರವರನ್ನು ಸನ್ಮಾನಿಸಲಾಯಿತು.