ಹಿರಿಯ ಉದ್ಯಮಿ ಕೋರ್ಟ್ ರಸ್ತೆ ವೈಭವ್ ಹೋಮ್ ಎಂಪ್ಲಾಯನ್ಸ್ ಮಾಲಕ ವೆಂಕಟ್ರಾಯ ಪೈ ನಿಧನ

0

ಪುತ್ತೂರು: ಹಿರಿಯ ಉದ್ಯಮಿ ಕೋರ್ಟ್ ರಸ್ತೆ ವೈಭವ್ ಹೋಮ್ ಎಂಪ್ಲಾಯ್ಸ್‌ನ ಮಾಲಕ ವೆಂಕಟ್ರಾಯ ಪೈ(62ವ) ಜು.28ರ ಸಂಜೆ ಸ್ವಗೃಹದಲ್ಲಿ ನಿಧನರಾದರು.

ದಿ.ರಾಮಾನಂದ ಪೈ ಅವರ ಪುತ್ರ ವೆಂಕಟ್ರಾಯ ಪೈ ಅವರು ಹಲವಾರು ವರ್ಷಗಳಿಂದ ವೈಭವ್ ಹೋಮ್ ಎಂಪ್ಲಾಯನ್ಸ್ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದರು. ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿಯೂ ಆಗಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಜು.29ರ ಮಧ್ಯಾಹ್ನ ನಡೆಸಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ. ಮೃತರು ಪತ್ನಿ ಗಾಯತ್ರಿ, ಇಬ್ಬರು ಪುತ್ರಿಯರು, ಸಹೋದರ ಬಾಲಕೃಷ್ಣ ಪೈ ಮತ್ತು ಸಹೋದರಿ ರಂಜಿತಾ ಶೆಣೈ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here