ಪುತ್ತೂರು: ಕೆರೆಯ ಬಳಿಗೆ ಬಂದ ವ್ಯಕ್ತಿ ಕಾಲು ಜಾರಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬೆಳಿಯೂರುಕಟ್ಟೆ ಅಗರ್ತಬೈಲಿನಲ್ಲಿ ನಡೆದಿದೆ.
ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಅಗರ್ತಬೈಲು ನಿವಾಸಿ ಜಗನ್ಮೋಹನ್ ರೈ ಅಗರ್ತಬೈಲು(58ವ) ಮೃತಪಟ್ಟವರು. ಕೆರೆಯ ಬಳಿಗೆ ಬಂದಿದ್ದ ಇವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಕಾಲುಜಾರಿ ಬಿದ್ದ ರಭಸಕ್ಕೆ ಕೆರೆಯ ಕೆಸರಿನಲ್ಲಿ ಸಿಲುಕಿಕೊಂಡಿದ್ದು ಮೇಲೆ ಬರಲಾಗದೇ ಉಸಿರುಗಟ್ಟಿ ಪ್ರಾಣ ತೆತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಮೃತದೇಹವನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯರಾದ ಕೃಪಾನ್, ಗುರುಕಿರಣ್, ಆನಂದ, ರಫೀಕ್ ಮೃತದೇಹವನ್ನು ಮೇಲೆತ್ತುವಲ್ಲಿ ಸಹಕರಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ನೂರಾರು ಜನರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು.