ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದಿಂದ ಕಂಡಡೊಂಜಿ ದಿನ ಕಾರ್ಯಕ್ರಮ

0

*ಸಾಂಪ್ರದಾಯಿಕ ಆಟಗಳಲ್ಲಿ ಸಂಭ್ರಮಿಸಿದ ಜನರು
*ಕಾರ್ಯಕ್ರಮಕ್ಕೆ ಮೆರುಗು ತಂದ ಜಾನಪದ ಸೊಗಡು ವಿಷಯಾಧಾರೀತ ನ್ರತ್ಯ ಗಾನ ಸಾಂಸ್ಕೃತಿಕ ವೈಭವ

ಕಾವು:ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘ ಇದರ ನೇತೃತ್ವದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ,ಮಹಿಳಾ ಸಂಘ ಮತ್ತು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಈಶ್ವರಮಂಗಲ ವಲಯ ಇದರ ಸಹಕಾರದೊಂದಿಗೆ ಕಂಡಡೊಂಜಿ ದಿನ ಕಾರ್ಯಕ್ರಮ ಈಶ್ವರಮಂಗಲ ಮರಕ್ಕಡ ಗದ್ದೆಯಲ್ಲಿ ಜು 28 ರಂದು ನಡೆಯಿತು.

ಉದ್ಘಾಟನಾ ಕಾರ್ಯಕ್ರಮ:
ಕಾರ್ಯಕ್ರಮವನ್ನು ಈಶ್ವರಮಂಗಲ ಮರಕ್ಕಡ ಗದ್ದೆಯ ಮಾಲಕರಾದ ಗಿರೀಶ್ ರೈ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಪೂರ್ವ ಅಧ್ಯಕ್ಷರಾದ ನಾಗಪ್ಪ ಗೌಡ ಬೊಮ್ಮೇಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನೆಟ್ಟಣಿಗೆ ಮುಡ್ನೂರು ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಕಲಾವತಿ ಎಸ್ ಗೌಡ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ನೆಟ್ಟಣಿಗೆ ಮುಡ್ನೂರು ಇದರ ಅಧ್ಯಕ್ಷರಾದ ದಿವಾಕರ ಗೌಡ ಮಡ್ಯಾಲಮಜಲು,ನೆಟ್ಟಣಿಗೆ ಮುಡ್ನೂರು ಒಕ್ಕಲಿಗ ಗೌಡ ಮಹಿಳಾ ಘಟಕದ ಅಧ್ಯಕ್ಷರಾದ ದೇವಿಪ್ರಶಾಂತಿ, ಶೇಶಪ್ಪಗೌಡ ಮೆಣಸಿನಕಾನ, ಜತ್ತಪ್ಪ ಗೌಡ ಕೊಂಕಣಿಗುಂಡಿ,ಮೋಹನಾಂಗಿ ಬೀಜಂತಡ್ಕ, ವಿಜಯ ಕುಮಾರ್ ಕೆಮ್ಮತಡ್ಕ, ಭಾಸ್ಕರ ಗೌಡ ದೊಡ್ಡಮನೆ, ಅರುಣ್ ಕುಮಾರ್ ಕನ್ನಡ್ಕ, ಬಡಗನ್ನೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಶ್ರೀಧರ ಗೌಡ ಕನ್ನಯ, ಸುಂದರ ಗೌಡ ಸಾರಕೂಟೇಲು, ಬಾಲಕೃಷ್ಣ ಗೌಡ ಪಟ್ಲಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಮಾರೋಪ ಕಾರ್ಯಕ್ರಮ
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಜಗ್ಗನಾಥ ಗೌಡ ಪಟ್ಟೆ ವಹಿಸಲಿದ್ದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಪೂರ್ವ ಶಾಸಕರಾದ ಸಂಜೀವ ಮಠಂದೂರು ಮಾತನಾಡಿ ಜಾನಪದ ಕ್ರೀಡೆ ಮತ್ತು ಸಂಪ್ರದಾಯವನ್ನು ಜೀವಂತವಾಗಿ ಉಳಿಸುವ ಹಾಗೂ ಇದರ ಅರಿವು ಇಲ್ಲದ ಯುವ ಜನತೆಗೆ ಜಾಗೃತಿ ಮುಡಿಸುವ ಉದ್ದೇಶದಿಂದ ಕಾರ್ಯಕ್ರಮ ಸಂಘಟಿಸಿದ ಯುವ ಒಕ್ಕಲಿಗ ಗೌಡ ಸೇವಾ ಸಂಘ ಈಶ್ವರಮಂಗಲ ವಲಯದ ಕಾರ್ಯವನ್ನು ಶ್ಲಾಘಿಸಿ ಅಭಿನಂದನೆ ತಿಳಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ, ಒಕ್ಕಲಿಗ ಗೌಡ ಸೇವಾ ಸಂಘದ ತಾಲೂಕು ಅಧ್ಯಕ್ಷರಾದ ರವಿ ಮುಂಗ್ಲಿಮನೆ,ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷರಾದ ಡಿ ವಿ ಮನೋಹರ್, ಒಕ್ಕಲಿಗ ಗೌಡ ಯುವ ಘಟಕದ ತಾಲೂಕು ಅಧ್ಯಕ್ಷರಾದ ಅಮರನಾಥ ಗೌಡ ಬಪ್ಪಳಿಗೆ, ಕಾರ್ಯಕ್ರಮ ಉದ್ದೇಶಿಸಿ ಮತನಾಡಿದರು.ವೇದಿಕೆಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಪೂರ್ವ ಅಧ್ಯಕ್ಷರಾದ ನಾಗಪ್ಪ ಗೌಡ ಬೊಮ್ಮೆಟ್ಟಿ, ನಿವೃತ್ತ ಪೊಲೀಸ್ ಅಧಿಕಾರಿ ಪದ್ಮನಾಭ ಗೌಡ ಮಡ್ಯಾಲಮಜಲು,ಈಶ್ವರಮಂಗಲ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವಲಯ ಉಸ್ತುವಾರಿ ಲೋಕೇಶ್ ಚಾಕೋಟೆ, ಒಕ್ಕಲಿಗ ಗೌಡ ಸೇವಾ ಸಂಘ ಕುಂಬ್ರ ವಲಯ ಉಸ್ತುವಾರಿ ಸತೀಶ್ ಪಾಂಬಾರು,ನೆಟ್ಟಣಿಗೆ ಮುಡ್ನೂರು ಗ್ರಾಮ ಸಮಿತಿ ಉಪಾಧ್ಯಕ್ಷರಾದ ನವೀನ್ ಕುಕ್ಕುಡೇಲು, ನಿಡ್ಪಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷರಾಗಿರುವ ನಾಗೇಶ್ ಗೌಡ ಪುಳಿತ್ತಡಿ,ಜಯರಾಮ ಗೌಡ ಶೇಖ,ಈಶ್ವರಮಂಗಲ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಈಶ್ವರಮಂಗಲ ವಲಯ ಉಸ್ತುವಾರಿ ಲೋಕೇಶ್ ಚಾಕೋಟೆ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಈಶ್ವರಮಂಗಲ ವಲಯ ಯುವ ಘಟಕದ ಸಂಘಟನಾ ಕಾರ್ಯದರ್ಶಿ ದೀಪಕ್ ಕುಮಾರ್ ಮುಂಡ್ಯ ವಂದಿಸಿದರು,ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟದ ಉದ್ಘೋಷಕರಾಗಿ ಪುರುಷೋತ್ತಮ ಗೌಡ ಕೋಲ್ಪೆ ಸಹಕರಿಸಿದರು,ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ ಎಂ, ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷರಾದ ಅನಿಲ್ ಕುಮಾರ್ ಕನ್ನಡ್ಕ,ಜೊತೆ ಕಾರ್ಯದರ್ಶಿ ಶರತ್ ಗೌಡ ಪುಳಿತ್ತಡಿ, ಸಾಂಸ್ಕತಿಕ ಕಾರ್ಯದರ್ಶಿ ಪ್ರೇಮಾನಂದ ಮುಡಿಪಿನನಡ್ಕ,ಕೋಶಾಧಿಕಾರಿ ಆಸ್ವಿತ್ ಮಾಡ್ಯಲಮಜಲು, ಕೋಶಾಧಿಕಾರಿ ಆಶೀರ್ವಾದ್ ಹೊಸಮನೆ, ಸಂದೇಶ್ ಚಾಕೋಟೆ ವಿವಿಧ ಕಾರ್ಯಕ್ರಮದಲ್ಲಿ ಸಹಕರಿಸಿದರು.


ಸಾಂಪ್ರಾದಾಯಿಕ ಕ್ರೀಡಾಕೂಟದಲ್ಲಿ ಸಂಭ್ರಮಿಸಿದ ಜನರು
ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಕೆಸರು ಗದ್ದೆಯಲ್ಲಿ ಸಾಂಪ್ರದಾಯಿಕ ಕ್ರೀಡಾಕೂಟದಲ್ಲಿ ಪುರುಷರು,ಮಹಿಳೆಯರು ಮಕ್ಕಳು ಸ್ಪರ್ಧಿಸಿ ಸಂಭ್ರಮಿಸಿದರು,ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.ಮಾಡ್ನೂರು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಯೋಗೀಶ್ ಕಾವು ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು.


ಸನ್ಮಾನ ಕಾರ್ಯಕ್ರಮ
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಗೊಂಡ ಪದ್ಮನಾಭ ಗೌಡ ಮಡ್ಯಾಲಮಜಲು,ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜನೆ ಮಾಡಿದ ತೇಜಸ್ವಿನಿ ನವೀನ್ ಗೌಡ ಕುಕ್ಕುಡೇಲು ,ಹಾಗೂ ಕ್ರೀಡಾಕೂಟ ನಡೆಸಲು ಗದ್ದೆ ನೀಡಿದ ಗದ್ದೆಯ ಮಾಲಕರಾದ ಗಿರೀಶ್ ರೈ ಮರಕ್ಕಡ ಇವರುಗಳನ್ನು ಶಾಲು,ಹಾರ ಹಾಕಿ ಸ್ಮರಣಿಕೆ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.


ಕಾರ್ಯಕ್ರಮಕ್ಕೆ ಮೆರುಗು ನೀಡಿದ ಜಾನಪದ ಸೊಗಡು ವಿಷಯಧಾರಿತ ನೃತ್ಯ-ಗಾನ ಸಾಂಸ್ಕೃತಿಕ ವೈಭವ
ಸಂಜೆ ಸಮರ್ಥ ಸಾಂಸ್ಕೃತಿಕ ಕಲಾ ತಂಡದಿಂದ ಗೌಡ ಸಮಾಜದಲ್ಲಿ ಜಾನಪದ ಸೊಗಡು ಎಂಬ ವಿಷಯಾಧಾರೀತವಾಗಿ ವಿನೂತನ ಶೈಲಿಯ ಜಾನಪದ ನೃತ್ಯಗಳು,ಅರೆ ಭಾಷೆ, ಕನ್ನಡ, ತುಳು ಭಾಷೆಯ ಗದ್ದೆ ಬೇಸಾಯವನ್ನು ವರ್ಣಿಸುವ ಜಾನಪದ ಸೊಬಗು ಹಾಗೆಯೇ ಗೌಡ ಸಮುದಾಯದ ಸೋಬಾನೆ ಹಾಡುಗಳು, ಆಳಿವಿನಂಚಿನಲ್ಲಿರುವ ಪಾಡ್ದನಗಳ ಅನಾವರಣವು ಕಾರ್ಯಕ್ರಮಕ್ಕೆ ಮೆರುಗು ನೀಡುವುದರ ಜೊತೆಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ತೇಜಸ್ವಿನಿ ನವೀನ್ ಗೌಡ ಕುಕ್ಕುಡೇಲು ಇವರ ಸಂಯೋಜನೆಯಲ್ಲಿ ಈ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here