ವಾಮದಪದವು: ಭಾರತ್ ಸ್ಕೌಟ್ಸ್ ಗೈಡ್ಸ್ ಮಹಾಸಭೆ ಮತ್ತು ಮಾಹಿತಿ ಕಾರ್ಯಾಗಾರ

0

ಪುತ್ತೂರು: ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ವಾಮದಪದವು ಇದರ 2023-24 ನೇ ಸಾಲಿನ ಮಹಾಸಭೆ ಮತ್ತು ಯೋಜನಾ ಪುಸ್ತಕ ಬಿಡುಗಡೆ ಹಾಗೂ ಕಳೆದ ಸಾಲಿನ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ವಾಮದಪದವು ವಲಯದ ಪ್ರತಿ ಶಾಲೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಪ್ರಥಮ ದರ್ಜೆ ಕಾಲೇಜು ವಾಮದಪದವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜು.29 ರಂದು ನಡೆಯಿತು.

ಅಧ್ಯಕ್ಷತೆಯನ್ನು ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ವಾಮದಪದವು ಇದರ ಎ.ಡಿ.ಸಿ ಶೇಖ್ ರಹ್ಮತ್ತುಲ್ಲಾಹ್ ವಹಿಸಿದ್ದರು.ಎಲ್ಲಾ ಗಣ್ಯರ ಸಮ್ಮುಖದಲ್ಲಿ ಯೋಜನಾ ಪುಸ್ತಕ ಬಿಡುಗಡೆ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಕೌಟ್ ಆಯುಕ್ತ ಬಿ.ಎಂ.ತುಂಬೆ ಮಾತಾಡಿ ದೀಪದಿಂದ ದೀಪವ ಬೆಳಗಬೇಕು ಅಂದರೆ ನಾವು ಬೆಳೆಯುವುದರ ಜೊತೆ ನಮ್ಮ ಸುತ್ತ ಮುತ್ತ ಇರುವ ಸರ್ಕಾರಿ ಶಾಲೆಗಳಲ್ಲೂ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು.ಇದರಿಂದ ದೇಶ ಕಟ್ಟುವ ವ್ಯವಸ್ಥೆ ಆಗಬೇಕು ಎಂದು ಹೇಳಿ ಪಂಚಾಯತ್ ಅಧ್ಯಕ್ಷರಲ್ಲಿ ಮುಂದೆ ವಾಮದಪದವು ವಲಯದಲ್ಲಿ ಈ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯಲು ತಮ್ಮ ಸಹಕಾರ ಬೇಕು ಎಂದು ಮನವಿ ಮಾಡಿದರು.

ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಪ್ರತೀಮ್ ಕುಮಾರ್ ಕೆ.ಎಸ್ ಮಾತನಾಡಿ ಸತತ ಪ್ರಯತ್ನ ಮಾಡುವುದರ ಮುಖಾಂತರ ಈ ಸಂಸ್ಥೆ ಅಭಿವೃದ್ಧಿ ಮಾಡಬೇಕು. ಈ ಸಂದರ್ಭದಲ್ಲಿ ಚೆನ್ನೈತ್ತೋಡಿ ಹಾಗೂ ಪಿಲಾತಬೆಟ್ಟು ಗ್ರಾಮಪಂಚಾಯತ್ ಅಧ್ಯಕ್ಷರಾದ ವನಿತಾ ಮತ್ತು ಶಾರದಾ ಇವರನ್ನು ಸನ್ಮಾನಿಸಲಾಯಿತು.ರಾಜ್ಯ ಸಹಾಯ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ,ಅಕ್ಷರಭಾರತಿ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ಮೋಹನ್ ,ಸರಕಾರಿ ಪ್ರಥಮ ದರ್ಜೆಕಾಲೇಜಿನ ಪ್ರಾಶುಂಪಾಲ ಡಾ. ರಾಧಕೃಷ್ಣ ,ಶಿಕ್ಷಕರು ಉಪಸ್ಥರಿದ್ದರು. ವಾರ್ಷಿಕ ವರದಿ ವಾಚನಾ ಹಾಗೂ ಸ್ವಾಗತ ಭಾಷಣ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಸುಕೇಶ್ ಕೆ ನೆರವೇರಿಸಿದರು. ಎಸ್. ಪಿ. ರಝೀಯಾ ಧನ್ಯವಾದ ಸಲ್ಲಿಸಿದರು. ಜೊತೆ ಕಾರ್ಯದರ್ಶಿ ಬೇಬಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here