ವಿದ್ಯಾಮಾತಾ ಅಕಾಡೆಮಿ , ಜೆಸಿಐ , ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಜಂಟಿ ಸಹಯೋಗದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

0

ಪುತ್ತೂರು : ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾಮಾತಾ ಅಕಾಡೆಮಿ, ಜೆ ಸಿ ಐ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಜಂಟಿ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ ಮತ್ತು ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ದ್ವಾರಕಾ ಕನ್ಸ್ಟ್ರಕ್ಷನ್ ನ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ವಹಿಸಿದ್ದರು. ಲಯನ್ ಕಾವು ಹೇಮನಾಥ ಶೆಟ್ಟಿ, ಜೆಸಿಐನ ಪೂರ್ವ ಅಧ್ಯಕ್ಷರಾದ ವಿಶ್ವ ಪ್ರಸಾದ್ ಸೇಡಿಯಾಪು, ಜೆಸಿಐ ಪುತ್ತೂರಿನ ಅಧ್ಯಕ್ಷ ಮೋಹನ್ ಕೆ, ಲಯನ್ಸ್ ಕ್ಲಬ್ ಅಧ್ಯಕ್ಷ ವೇದಾವತಿ ರಾಜೇಶ್ ರವರು ನಿವೃತ್ತ ಯೋಧ ಡಾ. ಗೋಪಾಲಕೃಷ್ಣ ಕಾಂಚೋಡು, ವೆಟರ್ನ್ ಸತ್ಯನಾರಾಯಣ ಭಟ್, ತಂಗಚ್ಚನ್ ಧರ್ಮಸ್ಥಳ, ಹೆರಾಲ್ಡ್ ಸಿಕ್ವೆರಾ ಮತ್ತು ವಾಲ್ಟರ್ ಸೀಕ್ವೆರಾ ಅವರನ್ನು ಸನ್ಮಾನಿಸಿದರು.ಹೆರಾಲ್ಡ್ ಸೀಕ್ವೆರಾ ಮತ್ತು ವಾಲ್ಟರ್ ಸಿಕ್ವೆರಾ, ಸಹೋದರರಾಗಿದ್ದು , ಇವರಿಬ್ಬರು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿರುವುದು ವಿಶೇಷ. ಇವರೊಂದಿಗೆ ಇವರ ಮಾತೃಶ್ರೀಯವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಬಿರಾವು, ಸಶಸ್ತ್ರ ಪಡೆಗಳ ಮೈದಾನ ತರಬೇತಿಯ ತರಬೇತುದಾರ ವಿಜೇಶ್, ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಎಸ್.ಎಸ್. ಸಿ ಜಿ.ಡಿ ಹುದ್ದೆಯ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಲಹರಿ, ಲಯನ್ಸ್ ಕ್ಲಬ್ ನ ಲಿಯೋ ಮಸ್ಕರೇನಸ್, ಲಯನ್ಸ್ ಕ್ಲಬ್ ನ ಪೂರ್ವ ಅಧ್ಯಕ್ಷ ರವೀಂದ್ರ ಪೈ, ಲಯನ್ ವತ್ಸಲಾ ಪದ್ಮರಾಜ್ ಶೆಟ್ಟಿ, ಲಯನ್ಸ್ ಲಿಯೋ ಕ್ಲಬ್ ನ ಅಧ್ಯಕ್ಷ ಲಾನ್ಸನ್ ರವರನ್ನು ವಿದ್ಯಾಮಾತಾ ಅಕಾಡೆಮಿಯ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಅವರು ಗೌರವಿಸಿದರು.


ಕಾರ್ಯಕ್ರಮದಲ್ಲಿ ಜೆಸಿಐ ಪೂರ್ವ ಅಧ್ಯಕ್ಷರಾದ ಶಶಿರಾಜ್ ರೈ ಲಯನ್ಸ್ ಕ್ಲಬ್ ನ ರವಿಪ್ರಸಾದ್ ಶೆಟ್ಟಿ, ಕೇಶವ ಪೂಜಾರಿ ಬೆದ್ರಾಳ, ಭಾಸ್ಕರ ಸುವರ್ಣ, ಅಬೂಬಕರ್ ಮುಲ್ಲಾರ್, ಸುಮಿತ್ರ, ರಂಜಿನಿ ಶೆಟ್ಟಿ, ಮೊಹಮ್ಮದ್ ಹನೀಫ್ , ಜೆಸಿಐ ನ ಪ್ರಿಯಾಲತಾ ಡಿ ಸಿಲ್ವಾ ಉಪಸ್ಥಿತರಿದ್ದರು. ವಿದ್ಯಾಮಾತಾ ಅಕಾಡೆಮಿಯ ತರಬೇತುದಾರ ಚಂದ್ರಕಾಂತ್ ಮತ್ತು ಚೇತನಾ ಸತೀಶ್ ರವರು ನಿರೂಪಿಸಿದರು. ವಿದ್ಯಾಮಾತಾ ಅಕಾಡೆಮಿಯ ಸಶಸ್ತ್ರ ಪಡೆಗಳ ನೇಮಕಾತಿ ತರಬೇತಿಯ ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here