ಪುತ್ತೂರು: ಭಾರೀ ಮಳೆಗೆ ರಸ್ತೆ ಕುಸಿತಗೊಂಡು ಸಂಚಾರಕ್ಕೆ ತೊಂದರೆಯುಂಟಾದ ಘಟನೆ ಪರ್ಪುಂಜದಿಂದ ವರದಿಯಾಗಿದೆ. ಪರ್ಪುಂಜ ನಿವಾಸಿ ದಿನೇಶ್ ರೈ ಹಾಗೂ ಇತರ ಕೆಲವು ಮಂದಿಯ ಮನೆಗೆ ತೆರಳುವ ರಸ್ತೆಯು ಮಧ್ಯ ಭಾಗದಲ್ಲಿ ಕುಸಿತಗೊಂಡಿದ್ದು ಮೋರಿ ಸಮೇತ ಕುಸಿತಗೊಂಡ ಪರಿಣಾಮ ವಾಹನ ಸಂಚಾರ ಹಾಗೂ ಜನ ಸಂಚಾರಕ್ಕೆ ತೊಂದರೆಯುಂಟಾಗಿದೆ ಎಂದು ತಿಳಿದು ಬಂದಿದೆ.